ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಯಲಹಂಕ: ನಾಡಪ್ರಭು ಕೆಂಪೇಗೌಡ್ರ ಮನೆದೇವ್ರು ಶ್ರೀ ವೇಣುಗೋಪಾಲ ಸ್ವಾಮಿ ಜಾತ್ರೆ; ರಥ ಎಳೆದ ಸಹಸ್ರ ಜನತೆ

ಯಲಹಂಕ: ನಾಡಪ್ರಭು ಕೆಂಪೇಗೌಡರ ಮನೆದೇವರಾದ ಶ್ರೀ ವೇಣುಗೋಪಾಲ ಸ್ವಾಮಿ ಜಾತ್ರೋತ್ಸವ ವಿಜೃಂಭಣೆಯಿಂದ ನಡೆಯಿತು. ಕಳೆದ ಎರಡು ವರ್ಷ ಕೊರೊನಾ ಹಿನ್ನೆಲೆಯಿಂದಾಗಿ ಜಾತ್ರೆ ನಡೆದಿರಲಿಲ್ಲ.

ಈ ವರ್ಷ ಒಂದು ಕೋಟಿ ವೆಚ್ಚದ ಹೊಸರಥ ಹಾಗೂ ಧ್ವಜಸ್ತಂಭ ಜಾತ್ರೆಯ ಆಕರ್ಷಣೆಯಾಗಿತ್ತು. ಜಾತ್ರೆಗೆ ಜನಸಾಗರವೇ ಹರಿದುಬಂದಿತ್ತು.

ಕೆಂಪೇಗೌಡರ ಮನೆ ದೇವರಾದ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದರಿಂದ ಯಲಹಂಕ ಶಾಸಕ ವಿಶ್ವನಾಥ್ ಹಾಗೂ ತಾಲೂಕು ಆಡಳಿತ ದೇವರಿಗೆ ಪೂಜೆ ಸಲ್ಲಿಸಿದ ನಂತರ ರಥವನ್ನು ಎಳೆಯಲಾಗ್ತದೆ.

ರಥವನ್ನು ಸಾವಿರಾರು ಜನ ಸೇರಿ ಎಳೆದರು. ಭಕ್ತರು ದೇವರಿಗೆ ಬಾಳೆಹಣ್ಣು, ದವಣ, ಪೂಜೆ ಸಲ್ಲಿಸುವುದರಲ್ಲಿ ಮಗ್ನರಾಗಿದ್ದರು. ಭಕ್ತಿಯ ಹರಕೆ ಎಂಬಂತೆ ಜನರ ದಾಹ, ಹಸಿವು ತಣಿಸಲು ಪಾನಕ, ಮಜ್ಜಿಗೆ ವಿತರಿಸಲಾಯಿತು.

ಯಲಹಂಕ ಸುತ್ತಮುತ್ತ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಆಂಧ್ರದಿಂದ ಸಾವಿರಾರು ಭಕ್ತರು ಸ್ವಾಮಿಯ ಬ್ರಹ್ಮರಥೋತ್ಸವಕ್ಕೆ ಬಂದಿದ್ದರು. ಬಂದವರಿಗೆ ಅನ್ನದಾನದ ವ್ಯವಸ್ಥೆ ಇತ್ತು. ಆನಂದರಾವ್ ಭಜನಾ ಮಂದಿರ 500 ಕೆ.ಜಿ. ಪುಳಿಯೋಗರೆ ಮಾಡಿ, ಭಕ್ತರಿಗೆ ವಿತರಿಸಿದರು. ನೆರೆದಿದ್ದ ಸಹಸ್ರಾರು ಭಕ್ತಾದಿಗಳು ಶ್ರೀ ವೇಣುಗೋಪಾಲ ಸ್ವಾಮಿ ರಥವನ್ನೆಳೆದು ಪೂಜೆ ಸಲ್ಲಿಸಿದರು.

- SureshBabu Public Next ಯಲಹಂಕ

Edited By : Nagesh Gaonkar
PublicNext

PublicNext

17/04/2022 04:17 pm

Cinque Terre

60.91 K

Cinque Terre

0

ಸಂಬಂಧಿತ ಸುದ್ದಿ