ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಶ್ರೀ ನೆಲದಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಹನುಮ ಜಯಂತ್ಯುತ್ಸವ

ದೊಡ್ಡಬಳ್ಳಾಪುರ: ಶ್ರೀರಾಮ ನವಮಿ ಮಹೋತ್ಸವದ ಅಂಗವಾಗಿ ಹನುಮ ಜಯಂತಿಯನ್ನು ನಗರದ ಶ್ರೀ ನೆಲದಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಪವಮಾನ ಹೋಮ ಮತ್ತು ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆ ನೆರವೇರಿಸಲಾಯಿತು.

ಬೆಳಿಗ್ಗೆ ಶ್ರೀ ಆಂಜನೇಯ ಸ್ವಾಮಿ‌ ಮೂರ್ತಿಗೆ ಅಭಿಷೇಕ, ವಿಶೇಷ ಪೂಜೆ ನಡೆಸಲಾಯಿತು. ಮಧ್ಯಾಹ್ನ ಶ್ರೀ ನೆಲದಾಂಜನೇಯ ಸೇವಾ ಟ್ರಸ್ಟ್ ವತಿಯಿಂದ ಪವಮಾನ ಹೋಮ ಜರುಗಿತು. ಉತ್ತರ ಭಾರತದಲ್ಲಿ ಇಂದು ಹನುಮ ಜಯಂತಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ‌ ಇಂದು ದೇವಸ್ಥಾನದಲ್ಲೂ ವಿಶೇಷ ಪೂಜೆ, ಧಾರ್ಮಿಕ ವಿಧಿ ವಿಧಾನ ನಡೆಯಿತು.

ದವನ ಹುಣ್ಣಿಮೆ‌ ಅಂಗವಾಗಿ ಪವಮಾನ ಹೋಮ ಆಯೋಜಿಸಲಾಗಿದ್ದು, ಸಾಮಾನ್ಯವಾಗಿ ಹನುಮ ಜಯಂತಿಯನ್ನು ಉತ್ತರ ಭಾರತದಲ್ಲಿ ಇಂದು ಆಚರಿಸಲಾಗುತ್ತಿದೆ. ದಕ್ಷಿಣ ಭಾರತದಲ್ಲಿ ‌ಡಿಸೆಂಬರ್ ತಿಂಗಳಲ್ಲೇ ಆಚರಿಸಲಾಗುತ್ತದೆ.

ದೇವರಿಗೆ ಮಹಾಮಂಗಳಾರತಿ ನಡೆದ ಬಳಿಕ ಹೋಮ ನಡೆಯಿತು.

ಅದಾದ ಬಳಿಕ ಶ್ರೀ ಸತ್ಯನಾರಾಯಣ ಪೂಜೆ, ಅನ್ನ ಸಂತರ್ಪಣೆ ಜರುಗಿತು. ರಾಮನವಮಿ‌ ದಿನದಂದು ‌ಸ್ವಾಮಿಯನ್ನು ಪಟ್ಟದಲ್ಲಿ ಕೂರಿಸಲಾಯಿತು. 9 ದಿನಗಳ ಕಾಲ ವಿಶೇಷ ಪೂಜೆ ನಡೆಯಲಿದೆ ಎಂದು ದೇವಸ್ಥಾನ ಟ್ರಸ್ಟ್ ಅಧ್ಯಕ್ಷ ಶ್ರೀಕಾಂತ್ ತಿಳಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

16/04/2022 08:36 pm

Cinque Terre

3.59 K

Cinque Terre

0

ಸಂಬಂಧಿತ ಸುದ್ದಿ