ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ವಿಜೃಂಭಣೆಯಿಂದ ನಡೆದ ಮದ್ದೂರಮ್ಮ ದೇವಿ ಜಾತ್ರೆ

ಬೆಂಗಳೂರು: ಆನೇಕಲ್ ತಾಲ್ಲೂಕಿನ ಹುಸ್ಕೂರು ಮದ್ದೂರಮ್ಮ ದೇವಿ ಜಾತ್ರೆ ಶ್ರದ್ಧಾಭಕ್ತಿಯಿಂದ ನಡೆಯಿತು. ವಿಜೃಂಭಣೆಯ ಜಾತ್ರೆಯಲ್ಲಿ ವಿವಿಧ ಗ್ರಾಮಗಳ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ಒಟ್ಟು ಏಳು ತೇರುಗಳನ್ನು ಕಟ್ಟಲಾಗಿದ್ದು ಭಕ್ತರು ಶ್ರದ್ಧೆಯಿಂದ ಉತ್ಸವದಲ್ಲಿ ಪಾಲ್ಗೊಂಡಿದ್ದರು.

ಮದ್ದೂರಮ್ಮ ದೇವಿಯ ಜಾತ್ರೆಗೆ ದೊಡ್ಡನಾಗಮಂಗಲ, ಸಿಂಗೇನ ಅಗ್ರಹಾರ ಮತ್ತು ಲಕ್ಷ್ಮೀನಾರಾಯಣಪುರ ಗ್ರಾಮದ ತೇರುಗಳು ಮದ್ದೂರಮ್ಮ ದೇವಿ ದೇವಾಲಯದ ಆವರಣಕ್ಕೆ 8.30ರ ಸುಮಾರಿಗೆ ಬಂದಿತು. ರೈಲ್ವೇ ವಿದ್ಯುದ್ದೀಕರಣ ಕಾಮಗಾರಿ ಪ್ರಭಾವದಿಂದ ಕೊಡತಿ, ಚೊಕ್ಕಸಂದ್ರ ಮತ್ತು ನಾರಾಯಣಘಟ್ಟ ತೇರುಗಳು ಚಿಂತಲಮಡಿವಾಳದ ಬಳಿ ಬಂದಿದ್ದವು.

130 ಅಡಿಗೂ ಎತ್ತರದ ತೇರುಗಳನ್ನು 50-60 ಜೋಡಿ ಎತ್ತುಗಳಿಂದ ಎಳೆದು ತರುತ್ತಿದ್ದ ದೃಶ್ಯ ರೋಮಾಂಚನಕಾರಿಯಾಗಿತ್ತು. ತೇರುಗಳು ಬರುವ ದಾರಿಯುದ್ದಕ್ಕೂ ಅರವಟಿಗೆಗಳನ್ನು ಸ್ಥಾಪಿಸಿ ತೇರನ್ನು ಎಳೆಯುವವರಿಗೆ ಹಾಗೂ ತೇರಿನೊಂದಿಗೆ ಬರುವ ಭಕ್ತರಿಗೆ ನೀರು ಮಜ್ಜಿಗೆ, ಕೋಸಂಬರಿ, ಪಾನಕ ವಿತರಿಸಿದರು. ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು. ಸಹಸ್ರಾರು ಮಂದಿ ಭಕ್ತರು ಒಂದೆಡೆ ಸೇರಿದ್ದರಿಂದ ತಾಲ್ಲೂಕಿನ ಚಂದಾಪುರದಿಂದಲೇ ಟ್ರಾಫಿಕ್‌ ಜಾಮ್ ಉಂಟಾಗಿತ್ತು.

ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್ ಆನೇಕಲ್

Edited By : Manjunath H D
Kshetra Samachara

Kshetra Samachara

28/03/2022 09:16 pm

Cinque Terre

1.83 K

Cinque Terre

0

ಸಂಬಂಧಿತ ಸುದ್ದಿ