ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಬೆಂಗಳೂರಿನ ರಾಜಬೀದಿಗಳಲ್ಲಿ ಗಣೇಶ ವೈಭವ; ಅದ್ದೂರಿ ಮೆರವಣಿಗೆ

ಎಲ್ಲೆಲ್ಲೂ ಕೇಸರಿ ಪತಾಕೆಗಳ ಹಾರಾಟ,ಝಾಂಜ್‌ಪಥಕ್- ಡೊಳ್ಳು ಕುಣಿತದಝೇಂಕಾರ..ಜೈಶ್ರೀರಾಮ್ ಗಣಪತಿ ಬಪ್ಪಾ ಮೋರೆಯಾ ಜಯಘೋಷ...‌ಇದರ ಜೊತೆಯಲ್ಲಿ ಸಾಲಂಕೃತ ವಾಹನಗಳಲ್ಲಿ‌‌ಸಾಗಿಬಂದ ಬಗೆಬಗೆಯ ಅಲಂಕಾರದ ಗಜಾನನ,ಲಂಬೋದರ,ವಿಘ್ನೇಷ..‌ ಇದೆಲ್ಲಾ ದೃಶ್ಯಗಳು ಕಂಡು ಬಂದಿದ್ದು ಬೆಂಗಳೂರಿನ ಚಾಮರಾಜಪೇಟೆಯ ಬೀದಿಗಳಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಸಹ ಗಣೇಶೋತ್ಸವವನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಆಚರಿಸಿದ ಬೆಂಗಳೂರಿನ ಚಾಮರಾಜಪೇಟೆಯ ನಾಗರೀಕರು.

ಕೊನೆಯದಿನವಾದ ಇಂದು ಅಭೂತಪೂರ್ವ ವಿಸರ್ಜನಾಪೂರ್ವ ಮೆರವಣಿಗೆಯೊಂದಿಗೆ ಮಹಾಗಣಪತಿಯನ್ನು ಕಳಿಸಿಕೊಟ್ಟರು.. ಚಾಮರಾಜಪೇಟೆ ನಾಗರೀಕರ ಒಕ್ಕೂಟದಿಂದ ಏರ್ಪಡಿಸಿದ್ದ ಮೆರವಣಿಗೆಯಲ್ಲಿ ಮಕ್ಕಳು,ಯುವಕರು ಮಹಿಳೆಯರು ನೃತ್ಯಮಾಡುವ ಮೂಲಕ ಅದ್ದೂರಿ ಮೆರವಣಿಗೆಗೆ ಮೆರಗು ತಂದರು. ಗಣೇಶನ ಮೆರವಣಿಗೆಯ ಒಂದು ಝಲಕ್ ಇಲ್ಲಿದೆ....

Edited By :
PublicNext

PublicNext

10/09/2022 09:17 pm

Cinque Terre

48.79 K

Cinque Terre

0

ಸಂಬಂಧಿತ ಸುದ್ದಿ