ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಯಲಹಂಕ ಇನ್ಸ್‌ಪೆಕ್ಟರ್ ಸತ್ಯನಾರಾಯಣರಿಗೆ ಸಿಬ್ಬಂದಿ, ಜನರಿಂದ ಮೆಚ್ಚುಗೆಯ ಬೀಳ್ಕೊಡುಗೆ

ಯಲಹಂಕ: ಕೊರೊನಾ ಮೊದಲ ಲಾಕ್‌ಡೌನ್ ವೇಳೆ ಆಫ್ರಿಕಾ ಪ್ರಜೆಗಳ ಪುಂಡಾಟಿಕೆಗೆ ಬ್ರೇಕ್ ಹಾಕಿ ಅವರಿಂದಲೇ ರಾಷ್ಟ್ರಗೀತೆ‌ ಹಾಡಸಿದ ಅರಕ್ಷಕ, 2ನೇ ಲಾಕ್‌ಡೌನ್ ವೇಳೆ ಯಲಹಂಕದಲ್ಲಿ ನೂರಾರು ಜನರಿಗೆ, ಬಡವರಿಗೆ ಆಕ್ಸಿಜನ್ ಸೌಲಭ್ಯ ಒದಗಿಸಿ ಪ್ರಾಣ ಉಳಿಸಿದ ಜೀವರಕ್ಷಕ. ಪೊಲೀಸರೆಂದರೆ ಬಂದೋಬಸ್ತ್, ಕಳ್ಳರು, ಬಂಧನ ಹೊಡಿ-ಬಡಿ ನಡೆಸಿ ಭಯ ಹುಟ್ಟಿಸ್ತಾರೆ ಅಂತಾನೆ ಎಲ್ಲರೂ ಭಾವಿಸುತ್ತೇವೆ. ಖಡಕ್ ಕಾರ್ಯವೈಕರಿ ಜೊತೆಗೆ ಮಾನವೀಯತೆ ಇದ್ದರೆ ಅವರು ಜನ ಮೆಚ್ಚುಗೆಗೆ ಪಾತ್ರರಾಗ್ತಾರೆ ಎನ್ನುವುದಕ್ಕೆ ಯಲಹಂಕ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಸತ್ಯನಾರಾಯಣ ಅವರೇ ಸಾಕ್ಷಿ.

ನಿಷ್ಠಾವಂತ, ದಕ್ಷ ಖಡಕ್ ಅಧಿಕಾರಿ ಇನ್ಸ್‌ಪೆಕ್ಟರ್ ಕೆ.ಪಿ.ಸತ್ಯನಾರಾಯಣ ಅವರು ಯಲಹಂಕಕ್ಕೆ ಬಂದ್ಮೇಲೆ ಅನೇಕ ಜನಪರ ಕೆಲಸಗಳಾಗಿವೆ. ಕಳ್ಳತನ, ಸುಲಿಗೆ, ಜೂಜಾಟ, ಮಟ್ಕಾ ಆಕ್ಟಿವಿಟೀಸ್‌ಗೆ ಕಡಿವಾಣ ಹಾಕಿ ಜನ ಮೆಚ್ಚುಗೆಗೆ ಪಾತ್ರರಾಗಿದ್ದರು. ಇಂತಹ ಪ್ರಾಮಾಣಿಕ ಪೋಲಿಸ್ ಅಧಿಕಾರಿ ಸದ್ಯ ಯಲಹಂಕ ಪೊಲೀಸ್ ಠಾಣೆಯಿಂದ ವರ್ಗಾವಣೆಯಾಗಿದ್ದಾರೆ. ಖಡಕ್ ಆಫೀಸರ್ ವರ್ಗಾವಣೆಯಾದರೆ ಸಾಕು ಅನ್ನೋ ಸಿಬ್ಬಂದಿ ಇರೋ ಈ ಕಾಲದಲ್ಲಿ ಸಿಬ್ಬಂದಿ ಮತ್ತು ಜನರಿಂದ ಸಂಭ್ರಮದ ಬೀಳ್ಕೊಡುಗೆ ಸಿಗೋದು ಅಪರೂಪ. ಇದೇ ವೇಳೆ ಸಿಬ್ಬಂದಿ ಮತ್ತು ಯಲಹಂಕ ಜನತೆಗೆ ಇನ್ಸ್‌ಪೆಕ್ಟರ್ ಸತ್ಯನಾರಾಯಣ ಧನ್ಯವಾದ ಅರ್ಪಿಸಿದ್ದಾರೆ.

21ನೇ ವಯಸ್ಸಿಗೆ PSI ಆಗಿ, ಸೇವೆ ಮಾಡುತ್ತ ಇನ್ಸ್‌ಪೆಕ್ಟರ್ ಆಗಿ ಸತ್ಯನಾರಾಯಣ ಅವರ ಸೇವೆ ಜನಪರವಾಗಿದೆ. ಹಾಗಿದ್ದರೆ ಮಾತ್ರ ಪೊಲೀಸ್ ಅಧಿಕಾರಿಗೆ ಸಿಬ್ಬಂದಿಯಿಂದ ಮತ್ತು ಜನರಿಗೆ ಪುಷ್ಪ ನಮನದ ಅದ್ದೂರಿ ಬೀಳ್ಕೊಡುಗೆ ಸಿಗಲು ಸಾಧ್ಯ..

SureshBabu Public Next ಯಲಹಂಕ.

Edited By : Nagesh Gaonkar
Kshetra Samachara

Kshetra Samachara

20/05/2022 08:43 am

Cinque Terre

4.52 K

Cinque Terre

0

ಸಂಬಂಧಿತ ಸುದ್ದಿ