ಆನೇಕಲ್ :ಸಾಹಿತ್ಯ ಬದುಕಿಗೆ ರಕ್ಷಣಾ ಕವಚವಾಗಿದೆ ನಾನಾ ವಿಧವಾದ ಸಮಸ್ಯೆಗಳನ್ನು ಸುಲಭವಾಗಿ ಅರ್ಥ ಮಾಡಿಸಿ ಸಮಾಜದ ಚಿಂತನೆಯಲ್ಲಿ ತೊಡಗಿಸುತ್ತದೆ ಎಂದು ಸರದಾರ್ ವಲ್ಲಬಾಯ್ ಪಟೇಲ್ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಡಾ ರವೀಂದ್ರ ರೆಡ್ಡಿ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಆನೇಕಲ್ ವಿಧಾನಸಭಾ ಕ್ಷೇತ್ರದ ವತಿಯಿಂದ ಸರ್ಜಾಪುರ ಸರದಾರ ವಲ್ಲಭಾಯಿ ಪಟೇಲ್ ಪ್ರೌಢಶಾಲೆಯಲ್ಲಿ ಸಾಹಿತ್ಯದ ಅರಿವು ಕಾರ್ಯಕ್ರಮವನ್ನು ಶಾಲೆಯ ಮುಖ್ಯೋಪಾಧ್ಯಾಯರಾದ ಡಾ. ರವೀಂದ್ರ ರೆಡ್ಡಿ ಉದ್ಘಾಟಿಸಿದರು. ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ದೈಹಿಕ ಶಿಕ್ಷಕರಾದ ವಿ ರಾಮಕೃಷ್ಣಪ್ಪ ಸಮಾಜ ಸೇವಕರಾದ ನವೀನ್ ಕವಿಯತ್ರಿ ಶಿಕ್ಷಕಿ ಮಂಜುಳಾ ಸರ್ಜಾಪುರ ಭಾಗವಹಿಸಿದ್ದರು.
Kshetra Samachara
27/07/2022 06:31 pm