ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ವಿಶ್ವ ಯೋಗ ದಿನಾಚರಣೆ ಟ್ರಸ್ಟ್ ವತಿಯಿಂದ ವಿಶ್ವ ಯೋಗ ದಿನ ಆಚರಿಸಲಾಯಿತು. ವಿವಿಧ ಶಾಲೆಗಳಿಂದ ಬಂದಿದ್ದ ಸಾವಿರಾರು ಸಂಖ್ಯೆಯ ವಿದ್ಯಾರ್ಥಿಗಳು, ಸಾರ್ವಜನಿಕರು ಸಾಮೂಹಿಕ ಯೋಗ ಕಾರ್ಯಕ್ರಮದಲ್ಲಿ ಭಾಗವಹಿಸಿ ಗಮನ ಸೆಳೆದರು.
ವಿಶ್ವ ಯೋಗ ದಿನಾಚರಣೆ ಅಂಗವಾಗಿ ತಪಸೀಹಳ್ಳಿಯ ಪುಷ್ಪಾಂಡಜ ಆಶ್ರಮದ ದಿವ್ಯಾಜ್ಞಾನಾನಂದ ಸ್ವಾಮೀಜಿ ಅವರು ವಿವಿಧ ಆಸನಗಳನ್ನು ಹೇಳಿಕೊಟ್ಟರು. ಶಾಸಕ ಟಿ.ವೆಂಕಟರಮಣಯ್ಯ, ಬಿಜೆಪಿ ಜಿಲ್ಲಾ ಫಲಾನುಭವಿಗಳ ಪ್ರಕೋಷ್ಠದ ಸಂಚಾಲಕ ಧೀರಜ್ ಮುನಿರಾಜು ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಯೋಗಾಸನ ಮಾಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ಯೋಗದಿಂದ ದೇಹ ಮತ್ತು ಮನಸ್ಸು ಉಲ್ಲಸಿತವಾಗಲಿದೆ. ನಮ್ಮ ಪೂರ್ವಿಕರು ಯೋಗಾಭ್ಯಾಸದಿಂದಲೇ ನೂರು ವರ್ಷ ಮೇಲ್ಪಟ್ಟು ಬದುಕುತ್ತಿದ್ದರು. ಯೋಗದಿಂದ ಆರೋಗ್ಯವೂ ಉತ್ತಮವಾಗಿರಲಿದೆ ಎಂದು ಹೇಳಿದರು.
ದಿವ್ಯಜ್ಞಾನಾನಂದ ಸ್ವಾಮೀಜಿ ಮಾತನಾಡಿ, ಇಡೀ ವಿಶ್ವವೇ ಯೋಗ ಸಂದೇಶ ನೀಡುತ್ತಿದೆ. ದೊಡ್ಡಬಳ್ಳಾಪುರ ತಾಲೂಕಿನ ಮಕ್ಕಳು, ಯುವಕರು ಹಾಗೂ ಮಹಿಳೆಯರು ಒಂದು ವಾರದವರೆಗೆ ಯೋಗ ವಿಜ್ಞಾನ ಶಿಬಿರ ಮಾಡಿ, ಇಂದಿನ ಕಾರ್ಯಕ್ರಮವನ್ನು ಯಶಸ್ವಿಗಾಗಿ ನಡೆಸಲಾಗಿದೆ. ಮಕ್ಕಳಲ್ಲಿ ಯೋಗದ ಜಾಗೃತಿ, ಲಾಭಗಳ ಅರಿವು ಮೂಡಿಸುವ ಜತೆಗೆ ಪ್ರಕೃತಿಯೆಡೆಗೆ ಸೆಳೆಯುವುದೇ ಯೋಗ ಕಾರ್ಯಕ್ರಮದ ಉದ್ದೇಶ ಎಂದು ಹೇಳಿದರು.
Kshetra Samachara
21/06/2022 05:26 pm