ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: 'ಹಸಿರೇ ಉಸಿರುʼ ಬಳಗದಿಂದ "ಹಸಿರು ಬೆಳೆಸಿ ಜೀವ ಉಳಿಸೋ" ಕೈಂಕರ್ಯ

ಯಲಹಂಕ: "ಹುಲ್ಲಾಗು ಬೆಟ್ಟದಡಿ... ಮನೆಗೆ‌ ಮಲ್ಲಿಗೆಯಾಗು" ಎಂಬಂತೆ ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕಿನ ಬೆಟ್ಟಹಲಸೂರಿನ ಶ್ರೀನಿವಾಸ ಮೂರ್ತಿ ನೇತೃತ್ವದ "ಹಸಿರೇ ಉಸಿರು ಬಳಗ" ಕಳೆದ 3 ವರ್ಷಗಳಿಂದ ಬೆಂಗಳೂರು ಉತ್ತರ ಭಾಗದಲ್ಲಿ ಹಸಿರನ್ನು ನೆಟ್ಟು ಉಸಿರನ್ನು ಉಳಿಸೋ ಕೆಲಸ ಮಾಡ್ತಿದೆ.

ನಾಲ್ಕೈದು ವರ್ಷಗಳಿಂದ ಬೆಂಗಳೂರು, ಯಲಹಂಕ, ತುಮಕೂರು ‌ದೊಡ್ಡಬಳ್ಳಾಪುರ, ದೇವನಹಳ್ಳಿ ಹೀಗೆ ಎಲ್ಲೆಲ್ಲಿ‌ ಸರ್ಕಾರದ ಖಾಲಿ ಜಾಗಗಳಿರುತ್ತೋ ಅಲ್ಲಿ ಗಿಡ ನೆಟ್ಟು ಬರ್ತಾರೆ. ಇದುವರೆಗೂ 4ರಿಂದ 5 ಸಾವಿರ ಗಿಡ ನೆಟ್ಟಿದ್ದಾರೆ. ಇವರ ಸೇವೆಗೆ ವೈದ್ಯರು, ಗ್ರಾಮಸ್ಥರು, ಪಂಚಾಯ್ತಿ ಸದಸ್ಯರು ಕೈ ಜೋಡಿಸುತ್ತಿದ್ದಾರೆ.

ಇಷ್ಟು ದಿನ‌ ಏನೋ ಮಾಡ್ತಿದ್ದಾರೆ‌ ಅಂದುಕೊಂಡಿದ್ದ ಗ್ರಾಮಸ್ಥರು, ಕೊರೊನಾ ಲಾಕ್‌ ಡೌನ್ ವೇಳೆ ಆಕ್ಸಿಜನ್ ಅಭಾವದಿಂದ ಎಚ್ಚೆತ್ತಿದ್ದಾರೆ. ಬೆಟ್ಟಹಲಸೂರಿನ‌ ಶ್ರೀನಿವಾಸ ಮೂರ್ತಿ, ಗೋವಿಂದ ರಾಜು, ವೆಂಕಟೇಶ್, ನಂಜುಂಡಪ್ಪ, ಭರತ್ ಮತ್ತಿತರರ 10 ಮಂದಿಯ ತಂಡವೇ "ಹಸಿರೇ ಉಸಿರು ಬಳಗ".

ಈಗ ಗ್ರಾಮಸ್ಥರು, ವಿವಿಧ ಸಂಘ- ಸಂಸ್ಥೆಗಳು ಬೆಂಬಲ ನೀಡ್ತಿದ್ದಾರೆ. ಸದ್ಯ, ಬೆಟ್ಟಹಲಸೂರು ಕೆರೆ, ಪಶುವೈದ್ಯ ಅಸ್ಪತ್ರೆ,‌ ಮೈದಾನ, ಸ್ಮಶಾನ, ರಸ್ತೆ ಬದಿ ಹೀಗೆ ಎಲ್ಲೆಲ್ಲಿ‌ ಖಾಲಿ ಜಾಗ ಇರುತ್ತೋ ಅಲ್ಲಿ ಗಿಡ ನೆಟ್ಟು ಪರಿಸರ ಉಳಿಸೊ ಕಾರ್ಯ ಮಾಡ್ತಿದೆ "ಹಸಿರೇ‌ ಉಸಿರು ಬಳಗ".

Edited By : Nagesh Gaonkar
PublicNext

PublicNext

11/07/2022 08:31 am

Cinque Terre

41.96 K

Cinque Terre

4

ಸಂಬಂಧಿತ ಸುದ್ದಿ