ಬೆಂಗಳೂರು : ಜನ.. ಜನ.. ಜನ.. ಲಾಲ್ಬಾಗ್ ನಲ್ಲಿ ಎಲ್ಲಿ ನೋಡಿದರೂ ಅಲ್ಲಿ ಬರೀ ಜನರೇ .ಹೌದು ಇಂದು ಸ್ವಾತಂತ್ರ್ಯ ದಿನದ ರಜದ ಹಿನ್ನೆಲೆಯಲ್ಲಿ ಸಾವಿರಾರು ಮಂದಿ ಲಾಲ್ ಬಾಗ್ ನಲ್ಲಿಯ ಫ್ಲವರ್ ಶೋ ನೋಡಲು ಬರುತ್ತಿದ್ದಾರೆ.
ಫ್ಲವರ್ ಶೋ ನೋಡಲು ರಾಜ್ಯದ ಮೂಲೆ ಮೂಲೆಗಳಿಂದ ಬಂದ ಜನ ಕಿಲೋಮೀಟರ್ ಗಟ್ಟಲೆ ಲೈನ್ ನಲ್ಲಿ ನಿಂತು ಟಿಕೆಟ್ ಪಡೆದಿದ್ದಾರೆ.
ಇನ್ನು ತಮ್ಮ ನೆಚ್ಚಿನ ನಟ ಡಾಕ್ಟರ್ ರಾಜಕುಮಾರ್ ಮತ್ತು ಡಾಕ್ಟರ್ ಪುನೀತ್ ರಾಜಕುಮಾರ್ ಅವರನ್ನು ಹೂವಿನ ಅಲಂಕಾರದಲ್ಲಿ ನೋಡಿದ ಜನ ಖುಷ್ ಆಗಿದ್ದಾರೆ.
ಅಪ್ಪು ಅಪ್ಪು ಎಂದು ಜೈಕಾರ ಹಾಕಿದ್ದಾರೆ. ನೆನ್ನೆಯವರೆಗೂ ಲಾಲ್ ಬಾಗ್ ನಲ್ಲಿಯ ಫ್ಲವರ್ ಶೋ ನೋಡಲು ಮೂರು ಲಕ್ಷಕ್ಕೂ ಹೆಚ್ಚು ಜನ ಬಂದಿದ್ದಾರೆ. ಇಂದು ಕೂಡ ಸಾವಿರಾರು ಜನ ಲಾಲ್ ಬಾಗ್ ಫ್ಲವರ್ ಶೋ ನೋಡಲು ಬರುತ್ತಿದ್ದಾರೆ.
ಈ ಕುರಿತು ಸ್ಥಳದಿಂದ ನಮ್ಮ ಪ್ರತಿನಿಧಿ ನವೀನ್ ನೀಡಿರುವ ವರದಿ ಇಲ್ಲಿದೆ ನೋಡಿ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
15/08/2022 09:40 pm