ನೆಲಮಂಗಲ: ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಜಾಗೃತ ಜನನಿ ಶೀರ್ಷಿಕೆಯಡಿ ಬೆಂಗಳೂರು ಉತ್ತರ ತಾಲ್ಲೂಕು ದಾಸನಪುರ ಗ್ರಾಮದ ಹಾರ್ವರ್ಲ್ಡ್ ಸಾಮೂಹಿಕ ಶಿಕ್ಷಣ ಸಂಸ್ಥೆ ಆಯೋಜಿಸಿದ್ದ ತಾಯಂದಿರ ಕಾರ್ಯಕ್ರಮವನ್ನು ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಡಾ.ರಾಜಣ್ಣ ಉದ್ಘಾಟಿಸಿದರು.
ಮಹಿಳಾ ದಿನಾಚರಣೆ ಪ್ರಯುಕ್ತ ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಮದರ್ ಥೇರಸಾ, ಇಂದಿರಾ ಗಾಂಧಿ, ಕಲ್ಪನಾ ಚಾವ್ಲ, ಐಶ್ವರ್ಯ ರೈ, ಸಾನಿಯಾ ಮಿರ್ಜಾ ಸೇರಿದಂತೆ ಅನೇಕ ವೀರ ವನಿತೆಯರು, ಸಾಧಕ ಮಹಿಳೆಯರ ಛದ್ಮವೇಷ ಧರಿಸಿದ ಮಕ್ಕಳು ನೃತ್ಯ ರೂಪಕ ಪ್ರದರ್ಶನ ಮಾಡಿದ್ದು ವಿಶೇಷವಾಗಿತ್ತು.
ಇದೇ ವೇಳೆ ಹಾರ್ಡ್ ವರ್ಲ್ಡ್ ಸಾಮೂಹಿಕ ಶಿಕ್ಷಣ ಸಂಸ್ಥೆಯ ವ್ಯಪಸ್ಥಾಪಕ ಟ್ರಸ್ಟಿ ಡಾ.ರಾಜಣ್ಣ ಮಾತನಾಡಿ, 'ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಪೂಜ್ಯನೀಯ ಸ್ಥಾನವಿದೆ. ಕೆಲ ದಶಕಗಳ ಹಿಂದೆ ಇದ್ದ ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯ ಸ್ಥಿತಿಗತಿ ಶೋಚನೀಯವಾಗಿತ್ತು. ಈಗ ಕಾಲ ಬದಲಾಗಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ಮಹಿಳೆಯೂ ಸಾಮಾಜಿಕ, ಆರ್ಥಿಕ, ರಾಜಕೀಯವಾಗಿ ಬೆಳೆಯಲು ಸಾಧ್ಯವಾಗಿದೆ. ಇಲ್ಲಿನ ತಾಲೂಕು ಕಚೇರಿಯಲ್ಲಿ ಅತಿಹೆಚ್ಚು ಸಂಖ್ಯೆಯ ಮಹಿಳೆಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಮಹಿಳೆಯ ರಕ್ಷಣೆಗಾಗಿ ತಾಲೂಕು ಆಡಳಿತ ಸದಾ ಜೊತೆ ಇರುತ್ತದೆ. ತಾಲೂಕಿನಲ್ಲಿ ಇಲ್ಲಿಯವರೆಗೂ ಯಾವುದೇ ಒಂದು ಹೆಣ್ಣು ಮಗುವಿನ ಭ್ರೂಣಹತ್ಯೆ ಪ್ರಕರಣಗಳು ದಾಖಲಾಗದೇ ಇರುವುದು ಸಂತೋಷಕರ ಸಂಗತಿ ಎಂದು ತಿಳಿಸಿದರು.
Kshetra Samachara
08/03/2022 02:36 pm