ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಂದಿನವರ್ಷ ಜನವರಿ 6ರಿಂದ 8ರ ತನಕ ಹಾವೇರಿಯಲ್ಲಿ 86ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನ

ಬೆಂಗಳೂರು: ಹಾವೇರಿಯಲ್ಲಿ ೮೬ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು 2023ರ ಜನವರಿ6, 7ಮತ್ತು 8 ರಂದು ನಡೆಸುವ ಕುರಿತು ಬುಧವಾರ ವಿಧಾನಸೌಧದಲ್ಲಿ ನಡೆದ ಸಮ್ಮೇಳನ ಪೂರ್ವಭಾವಿ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ. ಮಹೇಶ ಜೋಶಿ, ಕಾರ್ಮಿಕ ಖಾತೆ ಮತ್ತು ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ್, ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರಾದ ವಿ ಸುನೀಲ್ ಕುಮಾರ್, ಶಾಸಕರಾದ ನೆಹರು ಓಲೇಕಾರ್, ಅರುಣಕುಮಾರ ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಲಿಂಗಯ್ಯ ಹಿರೇಮಠ ಭಾಗವಹಿಸಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ..

ಡಿಸೆಂಬರ್ 23.24.25 ರಂದು ಹಾವೇರಿಯಲ್ಲಿ86 ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ನಡೆಸಲು ಚರ್ಚಿಸಿದಾಗ, ಆ ದಿನಾಂಕಗಳಂದು ಪೂರ್ವನಿಯೋಜಿತ ಜನಸಂಕಲ್ಪ ಯಾತ್ರೆ ಇದ್ದು, ಅದರಲ್ಲಿಸಿಎಂ ಭಾಗವಿಸಬೇಕಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದ್ರೆಯ

ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಕೀರ್ಣದಲ್ಲಿ ವಿಶ್ವದಲ್ಲೇ ಪ್ರಥಮಬಾರಿಗೆ “ಅಂತರರಾಷ್ಟ್ರೀಯ ಸಾಂಸ್ಕೃತಿಕ ಸ್ಕೌಟ್ಸ್ ಮತ್ತು ಗೈಡ್ಸ್ ಜಾಂಬೋರಿ” ನಡೆಯುಲಿರುವುದರಿಂದ ಹಾಗೂ ದಾವಣಗೆರೆಯಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಅಧಿವೇಶನ ಮೂರು ದಿನ ನಡೆಯಲಿರುವ ಹಿನ್ನೆಲೆ, ಹಾವೇರಿ ಸಮ್ಮೇಳನವನ್ನು 2023ರ ಜನವರಿ 6-7-8ರ ಶುಕ್ರವಾರ, ಶನಿವಾರ ಮತ್ತು ರವಿವಾರದಂದು ನಡೆಸಲು ತೀರ್ಮಾನಿಸಲಾಗಿದೆ.

Edited By : Abhishek Kamoji
PublicNext

PublicNext

12/10/2022 08:34 pm

Cinque Terre

14.33 K

Cinque Terre

0

ಸಂಬಂಧಿತ ಸುದ್ದಿ