ವಿಶೇಷ ವರದಿ--ಪ್ರವೀಣ್ ನಾರಾಯಣ ರಾವ್...
ಜಗತ್ತಿನ ಮುಕ್ಕೋಟಿ ದೇವರುಗಳಲ್ಲಿ ಅತ್ಯಂತ ಜನಪ್ರಿಯ ಮತ್ತು ಸುಪ್ರಸಿದ್ಧ ದೇವರು ಅಂದರೆ ಅದು ನಮ್ಮ ಗಣೇಶ... ಅವನ ರೂಪವೂ ಚಂದ..
ಅವನ ಜನನದ ಕಥೆಯಂತೂ ಮಹದಾನಂದ.. ಜಾತಿ ಧರ್ಮಗಳನ್ನು ಮೀರಿ ಹಿರಿಕಿರಿಯರೆಂಬ ವಯೋಮಾನವನ್ನು ದಾಟಿ, ಬಡವ ಬಲ್ಲಿದರೆಂಬ ಬೇಧ ಭಾವಗಳನ್ನೂ ದಾಟಿ ಎಲ್ಲರಿಂದಲೂ ಸಮಾನವಾಗಿ ಆರಾಧಿಸಲ್ಪಡುವ ಏಕೈಕ ದೇವನೆಂದರೆ ಅವನು ಗಣಪ.. ಆತ ಆದಿಯಲ್ಲಿ ವಂದಿಪ.. ಶಿವ ಗಣಗಳಿಗೆಲ್ಲಾ ಅವನೇ ಅಧಿಪ..
ಇಂತಿಪ್ಪ ಗಣಪತಿಯ ವಿಶೇಷ ಆರಾಧನೆಯ ದಿನವೆಂದರೆ ಅದು ಭಾದ್ರಪದ ಶುಕ್ಲ ಚವತಿಯ ದಿನ. ಗಣಪತಿಯ ಹಲವು ವಿಧದ ಮೂರ್ತಿ ಗಳಿದ್ದರೂ ಚವವತಿಯ ದಿನ ಮಣ್ಣ ಗಣೇಶನನ್ನು ಪೂಜಿಸಿ ಆರಾಧಿಸಿ ಉತ್ಸವ ನಡೆಸುವುದು ಅತ್ಯಂತ ಶ್ರೇಷ್ಠ ಎಂದು ಪರಿಭಾವಿಸಿ ಗಣಪತಿಯ ಆರಾಧನೆ ತಲತಲಾಂತರಗಳಿಂದಲೂ ನಡೆದುಕೊಂಡು ಬರುತ್ತಿದೆ. ಇದಕ್ಕೆ ಅದರದ್ದೇ ಆದ ಪುರಾಣದ ಹಿನ್ನಲೆಯಿದೆ..
ಅದರದ್ದೇ ಆದ ಭಾವನೆ ಇದೆ..ಕಳೆದ ಎರಡು ವರ್ಷಗಳಿಂದ ಕರೋನಾದ ಕಾರಣದಿಂದ ಮಂಕಾಗಿದ್ದ ಗಣೇಶ ಚೌತಿ ಈ ಬಾರಿ ಮತ್ತೆ ಕಳೆಗಟ್ಟಿದೆ. ನಮ್ಮೆಲ್ಲಾ ಓದುಗರಿಗೆ,ವೀಕ್ಷಕರಿಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳೊಂದಿಗೆ
ಈ ವಿಶೇಷ ವರದಿ-- ಪ್ರವೀಣ್ ನಾರಾಯಣ ರಾವ್ ಬೆಂಗಳೂರು...
PublicNext
30/08/2022 08:12 pm