ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಹಸ್ರ ಮೋದಕ ಹವನಕ್ಕೆ ಹವಿಸ್ಸು ಅರ್ಪಿಸಿದ ಶಾಸಕ‌ ಜಮೀರ್ ಅಹ್ಮದ್

ಬೆಂಗಳೂರು: ಕಳೆದ ಸೋಮವಾರ ಚಾಮರಾಜಪೇಟೆಯ ತಮ್ಮ ಕಚೇರಿಯಲ್ಲಿ ಗಣಪತಿಯನ್ನು ಪ್ರತಿಷ್ಟಾಪಿಸಿ ಭರ್ಜರಿ ಉತ್ಸವ ನೆರವೇರಿಸಿದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಇಂದು ಬಸವನಗುಡಿಯ ಸುಪ್ರಸಿದ್ಧ ದೊಡ್ಡಗಣಪತಿ ಸಾನಿಧ್ಯದಲ್ಲಿ‌ ನಡೆದ

ಸಹಸ್ರ ಮೋದಕ ಗಣಹವನದಲ್ಲಿ ಪಾಲ್ಗೊಂಡು ಪೂರ್ಣಾಹುತಿ ವೇಳೆಯಲ್ಲಿ ಹವಿಸ್ಸನ್ನು ಅರ್ಪಿಸಿ ಭಕ್ತಿ ಸಮರ್ಪಣೆ ಮಾಡಿದ್ದಾರೆ..

ಬಸವನಗುಡಿಯ ದೊಡ್ಡಗಪತಿ ದೇವಸ್ಥಾನದ ಸಾನಿಧ್ಯದಲ್ಲಿರುವ ಧರ್ಮಸ್ಥಳ ಮಂಜುನಾಥ ಕಲ್ಯಾಣಮಂಟಪದಲ್ಲಿ ವಿದ್ಯಾಗಣಪತಿ ಸೇವಾ ಸಮಿತಿಯವರು ಪ್ರತಿಷ್ಟಾಪಿಸಿರುವ ಗಣಪತಿಯ ಸನ್ನಿಧಿಯಲ್ಲಿ ಇಂದು ಸಹಸ್ರ ಮೋದಕ ಗಣಹವನವನ್ನು ಏರ್ಪಡಿಸಲಾಗಿತ್ತು. ಮಹರ್ಷಿ ಡಾ ಆನಂದ ಗುರೂಜಿ,ಬೆಜ್ಜವಳ್ಳಿ ಸಂಸ್ಥಾನದ ವಿಶ್ವಸಂತೋಷ ಭಾರತಿ ಸ್ವಾಮೀಜಿ,ಪಾಲ್ಗೊಂಡಿದ್ದರು..

ದೊಡ್ಡಗಣಪತಿ ದೇವಸ್ಥಾನದ ಪುರೋಹಿತ ವರ್ಗ ಹವನ ನೆರವೇರಿಸಿದರು.. ಕನ್ನಡ ತಿಂಡಿಕೇಂದ್ರದ ಡಾ.ರಾಮಚಂದ್ರ ಹಾಗೂ ಅಶ್ವಥ್ ನಾರಾಯಣ‌ ಸಂಪೂರ್ಣ ಕಾರ್ಯಕ್ರಮದ ಮೇಲುಸ್ತವಾರಿ‌ ನೆರವೇರಿಸಿದರು..

ಪ್ರವೀಣ್‌ ನಾರಾಯಣ ರಾವ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು..

Edited By : Somashekar
PublicNext

PublicNext

07/09/2022 03:13 pm

Cinque Terre

26.21 K

Cinque Terre

3

ಸಂಬಂಧಿತ ಸುದ್ದಿ