ರಾಮನವಮಿಯ ಪರ್ವಕಾಲದಲ್ಲಿ ಇದೇ ಮೊದಲಬಾರಿ ಬೃಹತ್ ರಾಮರಥಯಾತ್ರೆ ನಡೆಯಲಿದೆ ಎಂದು ಕಂದಾಯ ಸಚಿವ ಆರ್. ಅಶೋಕ್ ಹೇಳಿದ್ದಾರೆ. ರಾಮನವಮಿಯ ದಿನವಾದ ಏಪ್ರಿಲ್ 10 ರ ಭಾನುವಾರ ಬೆಳಿಗ್ಗೆ 9 ಗಂಟೆಗೆ ಪದ್ಮನಾಭ ನಗರದ ವಾಜಪೇಯಿ ಕ್ರೀಡಾಂಗಣದಿಂದ ರಥಯಾತ್ರೆ ಆರಂಭವಾಗಲಿದೆ.
ರಥವನ್ನು ಇಸ್ಕಾನ್ ಅವರು ಸಿದ್ಧ ಪಡಿಸಿದ್ದು ರಾಮಲಕ್ಷ್ಮಣ ಸೀತೆ ಆಂಜನೇಯ ವಿಗ್ರಹಗಳನ್ನು ರಥದಲ್ಲಿ ಕೂರಿಸಿ ಮೆರವಣಿಗೆ ಮಾಡಲಾಗುವುದು ರಥಯಾತ್ರೆಯನ್ನು ಮಂತ್ರಾಲಯ ರಾಘವೇಂದ್ರ ಮಠದ ಸ್ವಾಮೀಜಿ, ಕನಕಪೀಠದ ಈಶ್ವರಾನಂದ ಸ್ವಾಮೀಜಿ, ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ ಉದ್ಘಾಟಿಸಲಿದ್ದು ಸುಮಾರು 10 ಸಾವಿರ ಜನ ಪಾಲ್ಗೊಳ್ಳುವ ನೀರೀಕ್ಷೆ ಇದೆ ಎಂದು ಅಶೋಕ್ ತಿಳಿಸಿದ್ದಾರೆ.
PublicNext
08/04/2022 01:04 pm