ಬೆಂಗಳೂರು: ಜಯನಗರ ವಿಧಾನಸಭಾ ಕ್ಷೇತ್ರ, ಶಾಲಿನಿ ಆಟದ ಮೈದಾನದಲ್ಲಿ ರಕ್ಷಾ ಫೌಂಡೇಶನ್ 10ನೇ ವರ್ಷಾಚರಣೆ ಜರುಗಿತು. ಈ ಕಾರ್ಯಕ್ರಮದಲ್ಲಿ ಇಂಫೋಸಿಸ್ ಕೂಡ ಕೈ ಜೋಡಿಸಿದೆ. 10 ಸಾವಿರ ವಿದ್ಯಾರ್ಥಿಗಳಿಗೆ 1 ಲಕ್ಷ ನೋಟ್ ಪುಸ್ತಕ, ಲ್ಯಾಪ್ ಟಾಪ್, sslc-puc ಪರೀಕ್ಷೆ ಉತ್ತೀರ್ಣರಾದ 30 ಮಕ್ಕಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು.
ಪ್ರತಿವರ್ಷದಂತೆ ಈ ವರ್ಷವೂ ಹಳ್ಳಿ ಭಾಗದ ಇಬ್ಬರು ಮಕ್ಕಳನ್ನು ದತ್ತು ಪಡೆದು ವಿದ್ಯೆ ಕೊಡುವ ಜವಾಬ್ದಾರಿ ʼರಕ್ಷಾʼ ವಹಿಸಿಕೊಂಡಿದೆ. ಮಕ್ಕಳಿಗೆ ಹೃದಯ ಸಮಸ್ಯೆ ಕಾಡಿದರೆ ಚಿಕಿತ್ಸೆಗೆ ಈ ಬಾರಿ ಜಯದೇವ ಆಸ್ಪತ್ರೆಗೆ 2 ಲಕ್ಷ ಚೆಕ್ ಹಸ್ತಾಂತರಿಸಲಾಗಿದೆ. ಕಾರ್ಯಕ್ರಮಕ್ಕೆ ಕಂದಾಯ ಸಚಿವ ಆರ್.ಅಶೋಕ್, ಸಂಸದ ತೇಜಸ್ವಿ ಸೂರ್ಯ ಆಗಮಿಸಿದ್ದು, ಸಿ.ಕೆ.ರಾಮಮೂರ್ತಿಯವರ ಸೇವಾ ಕೈಂಕರ್ಯ ಶ್ಲಾಘಿಸಿದರು.
ರಕ್ಷಾ ಫೌಂಡೇಶನ್ ವಿತರಿಸಿದ ಸೌಲಭ್ಯ: 1. ಬಿಬಿಎಂಪಿ ಮತ್ತು ಸರ್ಕಾರಿ ಶಾಲೆ, ಅರೆ ಸರ್ಕಾರಿ ಶಾಲೆಯ 10 ಸಾವಿರ ವಿದ್ಯಾರ್ಥಿಗಳಿಗೆ 1 ಲಕ್ಷ ನೋಟ್ ಪುಸ್ತಕ ಮತ್ತು 1 ಲಕ್ಷ ಪೆನ್. 2. 10 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್. 3. 95% ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಮತ್ತು 50 ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ. 4. ಇಬ್ಬರು ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಸಂಪೂರ್ಣ ವಿದ್ಯಾಭ್ಯಾಸಕ್ಕೆ 50 ಸಾವಿರ ಸಹಾಯಧನ. 5. ಜಯದೇವ ಆಸ್ಪತ್ರೆಗೆ ಮಕ್ಕಳ ಹೃದಯ ಚಿಕಿತ್ಸೆಗಾಗಿ 2 ಲಕ್ಷ ರೂ. ದೇಣಿಗೆ.
ಒಟ್ಟಿನಲ್ಲಿ ಈ ನೆರವಿನಿಂದಾಗಿ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಸಹಾಯ ಆಗೋದು ಖಂಡಿತಾ. ಮುಂದೊಂದು ದಿನ ಈ ಮಕ್ಕಳು ಉನ್ನತ ಮಟ್ಟಕ್ಕೆ ಬೆಳೆದು, ಸಮಾಜಕ್ಕೆ ಒಳಿತಾದ್ರೆ ಫೌಂಡೇಶನ್ ಹುಟ್ಟು ಹಾಕಿದ ಸದುದ್ದೇಶ ಸಾರ್ಥಕ.
-ರಂಜಿತಾ ಸುನಿಲ್ ʼಪಬ್ಲಿಕ್ ನೆಕ್ಸ್ಟ್ʼ ಬೆಂಗಳೂರು
PublicNext
28/06/2022 08:04 pm