ಬನ್ನೇರುಘಟ್ಟ ಸಮೀಪದ ಸರ್ಕಾರಿ ಶಾಲೆಯಲ್ಲಿ ಇಂದು ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯನ್ನು ಹಮ್ಮಿಕೊಳ್ಳಲಾಗಿತ್ತು. ಇನ್ನು ಪ್ರತಿಭಾ ಕಾರಂಜಿಯಲ್ಲಿ ಮಕ್ಕಳು ಸಹ ವಿಶೇಷ ವೇಷ ಭೂಷಣಗಳನ್ನು ತೊಟ್ಟು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಇನ್ನು ಆಹಾರ ಸಚಿವ ಉಮೇಶ್ ಕತ್ತಿ ನಿಧನ ಹಿನ್ನೆಲೆಯಲ್ಲಿ ಸರಳ ರೀತಿಯಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು .
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸುಮಾರು 14 ಕ್ಲಸ್ಟರ್ ಮಟ್ಟದ ಶಾಲೆಗಳು ಭಾಗಿಯಾಗಿದ್ವು. ಆನೇಕಲ್ ತಾಲೂಕುದ್ಯಂತ ಸುಮಾರು 21 ಕ್ಲಸ್ಟರ್ ಶಾಲೆಗಳು ಒಳಪಟ್ಟಿವೆ. ಇನ್ನು ಇಲ್ಲಿ ಪ್ರತಿಭಾ ಕಾರಂಜಿಯಲ್ಲಿ ಗೆಲುವು ಸಾಧಿಸಿದ ಮಕ್ಕಳು ತಾಲೂಕು ಮಟ್ಟದಲ್ಲಿ ಪ್ರತಿಭಾ ಕಾರಂಜಿಯಲ್ಲಿ ಭಾಗವಹಿಸಲಿದ್ದಾರೆ. ಈ ಪ್ರತಿಭಾ ಕಾರಂಜಿ ಎರಡು ವರ್ಷಗಳಿಂದ ಕರೋನ್ ಕಾರಣದಿಂದಾಗಿ ರದ್ದುಮಾಡಲಾಗಿತ್ತು ಮಕ್ಕಳ ಪ್ರತಿಭೆಯನ್ನ ಗುರುತಿಸುವ ಸಲುವಾಗಿ ಈ ಪ್ರತಿಭಾ ಕಾರಂಜಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಇಒ ವಿಜಯಲಕ್ಷ್ಮಿ ರಮೇಶ್ ತಿಳಿಸಿದರು.
ಇನ್ನು ಶಿಕ್ಷಕರ ಸಿಎಲ್‌ಪಿ ನಾಗರಾಜು ಮಾತನಾಡಿ ಇದು ಕಡೆಯ ಹಂತದ ಪ್ರತಿಭಾ ಕಾರಂಜಿ ಮುಗಳೂರು ಮತ್ತೆ ಬನ್ನೇರ್ಘಟ್ಟದಲ್ಲಿ ಇಂದು ಪ್ರತಿಭಾ ಕಾರಂಜಿ ಕೊನೆಯ ಯಾಗಲಿದೆ. ಇಲ್ಲಿ ಗೆಲುವು ಸಾಧಿಸಿದವರು ತಾಲೂಕು ಮಟ್ಟ ಜಿಲ್ಲಾ ಮಟ್ಟ ಮತ್ತು ರಾಜ್ಯಮಟ್ಟದಲ್ಲಿ ಭಾಗಿಯಾಗಲಿದ್ದಾರೆ. ಇನ್ನು ಕಾರ್ಯಕ್ರಮದಲ್ಲಿ ಶಾಲೆಯ ಶಿಕ್ಷಕರು ಶಾಲೆಯ ಮಕ್ಕಳು ಜಿಲ್ಲಾ ಪಂಚಾಯತಿಯ ಸದಸ್ಯರು ಪಂಚಾಯಿತಿ ಅಧ್ಯಕ್ಷರು ಭಾಗಿಯಾಗಿದ್ದರು.
PublicNext
09/09/2022 06:51 pm