ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಅರ್ಥಪೂರ್ಣವಾಗಿ ನಡೆದ ಛತ್ರಪತಿ ಶಾಹು ಮಹಾರಾಜರ ದಿನಾಚರಣೆ

ಆನೇಕಲ್‌: ಛತ್ರಪತಿ ಶಾಹು ಮಹಾರಾಜರ 148ನೇ ಜಯಂತಿಯನ್ನು ಹೆಬ್ಬಗೋಡಿ ಓಣಂ ಕಲ್ಯಾಣ ಮಂಟಪ ಸಭಾಂಗಣದಲ್ಲಿ ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಒಕ್ಕೂಟ ದಿಂದ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಹೆಬ್ಬಗೋಡಿ ಉಪವಿಭಾದ ಡಿವೈಎಸ್ಪಿ ಮಲ್ಲೇಶ್ ದೀಪ ಬೆಳಗುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜೊತೆಗೆ ದೇವನೂರು ಮಹಾದೇವ ಬರೆದಿರುವ ಆರ್ ಎಸ್ ಎಸ್ ಅಳ ಮತ್ತು ಅಗಲ ಪುಸ್ತಕವನ್ನು ಬಿಡುಗಡೆ ಮಾಡಿದರು.

ಇನ್ನೂ ಛತ್ರಪತಿ ಶಾಹು ಮಹಾರಾಜರು ಪ್ರಮುಖವಾಗಿ ಹಿಂದುಳಿದ ವರ್ಗಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಕೊಡುಗೆ ನೀಡುವುದರ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದರು. ಇನ್ನು ವಿಧವಾ ಪುನರ್ವಿವಾಹ ಅಸ್ಪೃಶ್ಯತೆ ನಿವಾರಣೆ ದೇವದಾಸಿ ಪದ್ಧತಿ ನಿಷೇಧ ಅಂತರ್ಜಾತಿ ವಿವಾಹ ಭೂಮಿ ಹಂಚಿಕೆ ವಿದ್ಯಾರ್ಥಿವೇತನ ಬಡವರಿಗೆ ಹಿಂದುಳಿದವರ್ಗದವರಿಗೆ ಮೀಸಲಾತಿ ಹೀಗೆ ನಾನಾವಿಧವಾದ ಸಾಮಾಜಿಕ ಕೆಲಸಗಳಲ್ಲಿ ತೋಡಿಕೊಂಡಿದ್ದರು ಅಂತಹ ಮಹಾನ್ ಪುರುಷನ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸುವುದು ಬಹಳ ಸಂತೋಷದ ವಿಚಾರ ಎಂದು ಪ್ರಗತಿಪರ ಒಕ್ಕೂಟದ ಅಧ್ಯಕ್ಷ ರಾವಣ ತಿಳಿಸಿದರು.

Edited By : PublicNext Desk
Kshetra Samachara

Kshetra Samachara

26/07/2022 06:42 pm

Cinque Terre

1.49 K

Cinque Terre

0

ಸಂಬಂಧಿತ ಸುದ್ದಿ