ಆನೇಕಲ್ : ಪಿಜ್ಜಾ ಬರ್ಗರ್ ರಾಷ್ಟ್ರೀಯ ಆಹಾರವಾಗಿ ಮಾರ್ಪಾಡಾಗಿರುವುದು ದುರಂತದ ವಿಚಾರ ಇಂದಿನ ಯುವ ಪೀಳಿಗೆ ಇಂತಹ ಮಾರಕ ಆಹಾರಗಳನ್ನು ಸೇವಿಸಿ ತಮ್ಮ ಬುದ್ಧಿಶಕ್ತಿಯನ್ನು ನಾಶ ಮಾಡಿಕೊಳ್ಳುತ್ತಿದ್ದಾರೆ ಎಂದು ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ವಿಷಾದ ವ್ಯಕ್ತಪಡಿಸಿದರು.
ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸರಕಾರಿ ಮಾದರಿ ಹೆಣ್ಣು ಮಕ್ಕಳ ಪ್ರಾಥಮಿಕ ಪಾಠ ಶಾಲೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ಆಹಾರ ಸಂರಕ್ಷಣಾ ದಿನಾಚರಣೆ ಅಂಗವಾಗಿ ಇಂದು ಆಹಾರದ ಬಗ್ಗೆ ಮಕ್ಕಳಿಗೆ ಜಾಗೃತಿ ಮೂಡಿಸಲಾಯಿತು
ಇನ್ನು ಕಾರ್ಯಕ್ರಮ ದಲ್ಲಿ ನೆರಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ವಿಜಯಕುಮಾರಿ ಮಾತನಾಡಿ ನಮ್ಮ ಆಹಾರವನ್ನು ನಿರ್ಧರಿಸುವ ಹಕ್ಕು ಯಾವ ಸರ್ಕಾರಗಳಿಗೂ ಇರುವುದಿಲ್ಲ ಮಕ್ಕಳು ತಿನ್ನುವ ಊಟದ ಮೇಲೆ ಯಾರ ಸರ್ವಾಧಿಕಾರವು ಇರಕೂಡದು ಎಂದು ಎಚ್ಚರಿಕೆ ನೀಡಿದರು.
ಇನ್ನು ಹೋರಾಟಗಾರ್ತಿ ಮಮತಾ ಕಾರ್ಯಕ್ರಮದ ಉದ್ಘಾಟನೆ ಮಾಡಿದರು ಕಸಾಪ ಅಧ್ಯಕ್ಷರಾದ ಆದೂರು ಪ್ರಕಾಶ್ ವಾಟಾಳ್ ಬಳಗದ ಸನಾವುಲ್ಲಾ ಟಿ ನಾಗರಾಜು ಅಪ್ಸರ ಆಲಿ ಖಾನ್ ಚುಟುಕು ಶಂಕರ್ ವಿಜಯ್ ಕುಮಾರಿ ಮುನೀರ್ ನಾಗಶ್ರೀ ಮುಖ್ಯೋಪಾಧ್ಯಾಯರಾದ ಉಷಾ ಇದ್ದರು.
Kshetra Samachara
07/06/2022 07:15 pm