ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಮೊದಲಬಾರಿಗೆ ಮಾದಕ ದಂಧೆಯಿಂದ ಕೋಟಿ ಕೋಟಿ ಗಳಿಸಿದವನ ಆಸ್ತಿ ಮುಟ್ಟುಗೋಲು

ಕಮಿಷನರ್ ಕಚೇರಿ: ನಗರದಲ್ಲಿ ಇದೇ ಮೊದಲಬಾರಿಗೆ ಮಾದಕ ಸರಬರಾಜು ದಂಧೆಯಿಂದ ಗಳಿಸಿದ್ದ, ಆರೋಪಿಯ ಆಸ್ತಿಯನ್ನ ಸಿಸಿಬಿ ಮುಟ್ಟುಗೋಲು ಹಾಕುವ ಮೂಲಕ ದಂಧೆಕೋರರಿಗೆ ಶಾಕ್ ನೀಡಿದೆ. ಮೃತ್ಯುಂಜಯ ಎಂಬ ಆರೋಪಿ ಮಾದಕ ಸರಬರಾಜು ದಂಧೆಯಿಂದ ಗಳಿಸಿದ್ದ 1 ಕೋಟಿ 60 ಲಕ್ಷ ಮೌಲ್ಯದ ಆಸ್ತಿಯನ್ನ ಸಕ್ಷಮ ಪ್ರಾಧಿಕಾರದ ಅನುಮತಿ ಪಡೆದು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ‌.

2007ರಿಂದಲೂ ಸುಮಾರು 9 ಎನ್.ಡಿ.ಪಿ.ಎಸ್ ಪ್ರಕರಣಗಳಲ್ಲಿ ಆರೋಪಿಯಾಗಿರುವ ಮೃತ್ಯುಂಜಯ ಇದೇ ವರ್ಷ ಜುಲೈನಲ್ಲಿ .ಕೆ ಆರ್.ಪುರಂ ಠಾಣಾ ವ್ಯಾಪ್ತಿಯಲ್ಲಿ ಸಿಸಿಬಿ ಪೊಲೀಸರಿಂದ ಬಂಧಿತನಾಗಿದ್ದ. ಬಂಧಿತನಿಂದ 80 ಲಕ್ಷ ಮೌಲ್ಯದ ವಿವಿಧ ಮಾದರಿಯ ಮಾದಕ ಪದಾರ್ಥಗಳನ್ನ ವಶಕ್ಕೆ ಪಡೆಯಲಾಗಿತ್ತು.

ಆರೋಪಿಯ ಹೆಸರಿನಲ್ಲಿದ್ದ ಹೊಸಕೋಟೆ ಟೌನ್ ನ 1 ವಾಣಿಜ್ಯ ನಿವೇಶನ, ಕೋಲಾರದ ಕೆಂಚಿಪುರ ಹಾಗೂ ಕಂಬಿಪುರದಲ್ಲಿರು 2 ನಿವೇಶನಗಳು, 6 ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ 44,387/- ರೂ ಜಪ್ತಿ ಮಾಡಲಾಗಿದೆ. ಆರೋಪಿಯ ಪತ್ನಿಯ ಬ್ಯಾಂಕ್ ಖಾತೆಗಳಿಗೆ ವಿವಿಧ ಮೂಲದಿಂದ 5 ಕೋಟಿಗೂ ಅಧಿಕ ಹಣ ಅಕ್ರಮವಾಗಿ ಸಂದಾಯವಾಗಿರುವುದು ಸಹ ಪತ್ತೆಯಾಗಿದ್ದು ತನಿಖೆ ಮುಂದುವರೆಸಲಾಗಿದೆ.

Edited By : Abhishek Kamoji
Kshetra Samachara

Kshetra Samachara

17/09/2022 03:03 pm

Cinque Terre

4.77 K

Cinque Terre

0

ಸಂಬಂಧಿತ ಸುದ್ದಿ