ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಚಾಕು ತೋರಿಸಿ ಮಹಿಳೆಯ ಮೇಲೆ ಅತ್ಯಾಚಾರ ಯತ್ನ

ಬೆಂಗಳೂರು: ನಗರದಲ್ಲಿ ಮಹಿಳೆಗೆ ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನಿಸಿದ ‌ಘಟನೆ ನಡೆದಿದೆ. ಸೆ.10ರ ರಾತ್ರಿ ಸುಮಾರು 9.30ರ ವೇಳೆಗೆ

ಅಶೋಕನಗರದ ಶಾಂತಲಾ ನಗರದಲ್ಲಿ ಘಟನೆ ನಡೆದಿದ್ದು, ವಿಲಿಯಂ ಪ್ರಕಾಶ್ ಎಂಬಾತ ಅತ್ಯಾಚಾರಕ್ಕೆ ಯತ್ನಿಸಿದ್ದಾನೆಂದು ಆರೋಪಿಸಲಾಗಿದೆ.

ಏರಿಯಾದಲ್ಲಿ ಶ್ರೀ ಗಣೇಶನನ್ನು ಕೂರಿಸಲಾಗಿತ್ತು. ರಾತ್ರಿ 8.30ಕ್ಕೆ ಗಣೇಶ ವಿಸರ್ಜನೆಗಾಗಿ ಅಲ್ಲಿದ್ದವರು ತೆರಳಿದ್ದರು. ಈ ಸಮಯದಲ್ಲಿ ಅಲ್ಲೇ ಪಕ್ಕದಲ್ಲಿದ್ದ ಚರ್ಚ್ನ ಲೈಟ್ ಆಫ್ ಮಾಡಲು ಮಹಿಳೆ ಹೋಗಿದ್ರು. ಈ ವೇಳೆ ಹಿಂದಿನಿಂದ ಬಂದು ಚರ್ಚ್ ಒಳಗೆ ನುಗ್ಗಿದ ಆರೋಪಿ ಚಾಕು ತೋರಿಸಿ ಅತ್ಯಾಚಾರಕ್ಕೆ ಯತ್ನ ಮಾಡಿದ್ದಾನೆಂದು ಹಾಗೂ ಕೊಲೆ ಮಾಡೋದಾಗಿ ಬೆದರಿಕೆ ಹಾಕಿದ್ದಾನೆಂದು ಆರೋಪಿಸಲಾಗಿದೆ.

ಈ ವೇಳೆ ಆರೋಪಿಯನ್ನು ತಳ್ಳಿ ಹೊರಗೆ ಓಡಿ ಬಂದ ಮಹಿಳೆ ಹೆದರಿಕೊಂಡಿದ್ದರಿಂದ ಇಷ್ಟು ದಿನಗಳ ವರೆಗೆ ದೂರು ನೀಡಿರಲಿಲ್ಲ. ಇದೀಗ ಕೆಲ ಸಾಮಾಜಿಕ ಕಾರ್ಯಕರ್ತರ ಸಹಾಯದಿಂದ ಅಶೋಕನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ‌. ಅಶೋಕನಗರ ಠಾಣೆ ಇನ್ಸ್ ಪೆಕ್ಟರ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

Edited By : Manjunath H D
PublicNext

PublicNext

16/09/2022 03:22 pm

Cinque Terre

26.05 K

Cinque Terre

1

ಸಂಬಂಧಿತ ಸುದ್ದಿ