ಕಮಿಷನರ್ ಕಚೇರಿ: ಇವ್ನು ನಟೋರಿಯಸ್ ರೌಡಿಗಳಲ್ಲೇ ನಟೋರಿಯಸ್ ಯಾರನ್ನ ಕಿಡ್ನಾಪ್ ಮಾಡಿದ್ರೂ, ಮರ್ಡರ್ ಮಾಡಿದ್ರು ಈತನ ಹೆಸ್ರು ಮಾತ್ರ ಕೇಸಲ್ಲಿ ಬರ್ತಿರ್ಲಿಲ್ಲ. ಬದಲಿಗೆ ಇವನ ಸಹಚರರು ಮಾತ್ರ ಕೇಸ್ ನಲ್ಲಿ ಫಿಟ್ ಆಗಿ ಜೈಲು ಸೇರ್ತಿದ್ರು. ನಟೋರಿಯಸ್ ರೌಡಿ ಬಾಂಬೆ ಸಲೀಮನ ಹಳೆ ಕ್ರೈಂ ಇದೀಗ ಒಂದೊಂದೆ ರಿವೀಲ್ ಆಗೋಕೆ ಶುರುವಾಗಿದೆ.
ಇಡೀ ಕರ್ನಾಟಕಕ್ಕೇ ಮಾರಕವಾಗಿರೋ ಬಾಂಬೇ ಸಲೀಂ ಹಳೆ ಹಿಸ್ಟರಿಯನ್ನ ಸಿಸಿಬಿ ಅಧಿಕಾರಿಗಳು ಬಾಯಿ ಬಿಡಿಸಿದ್ದಾರೆ. ತಿಂಗಳ ಹಿಂದೆ ಕಲಾಸಿಪಾಳ್ಯದ ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರನ್ನ ಕಿಡ್ನಾಪ್ ಅಟೆಮ್ಟ್ ಸಲೀಂ, ಧಾರವಾಡದ ಜೈಲಿನಲ್ಲೇ ಕೂತೇ ಕಿಡ್ನಾಪ್ ಮಾಡಿಸಲು ಸ್ಕೆಚ್ ಹಾಕಿದ್ದ.ಆದ್ರೆ, ಕಿಡ್ನಾಪ್ ಮಾಡೋಕೆ ಬಂದವ್ರೇ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದರು.
ಸಿಸಿಬಿ ವಿಚಾರಣೆ ನಡೆಸಿದಾಗ ಬಾಂಬೆ ಸಲೀಂನೇ ಕಿಡ್ನಾಪ್ ಮಾಡಿಸಿರೋದು ಖಚಿತವಾಗಿತ್ತು.ನಂತರ ಧಾರವಾಡ ಜೈಲಿನಿಂದ ಬಾಡಿ ವಾರೆಂಟ್ ಮೂಲಕ ಸಲೀಂನನ್ನ ಕರೆತಂದು ಸಿಸಿಬಿ ವಿಚಾರಣೆ ನಡೆಸಿದ್ರು,ಈ ವೇಳೆ ಸಲೀಂ ತಾನು ಹತ್ತಾರು ಕೊಲೆ,ಸುಲಿಗೆ,ಕಿಡ್ನಾಪ್ ಮಾಡಿಸಿರೋದು ಕನ್ಫರ್ಮ್ ಆಗಿದೆ. ಸೋಲದೇವನಹಳ್ಳಿಯಲ್ಲಿ ಪ್ರಕಾಶ್ ಎಂಬಾತನನ್ನ ಕೊಲೆ ಮಾಡಿ ಕೇಸಲ್ಲಿ ಲೋಕೇಶ್ ರೆಡ್ಡಿ ಎಂಬುವನನ್ನು ಫಿಟ್ ಮಾಡಿಸಿದ್ದ. ಲೋಕೇಶ ಮತ್ತು ಸಹಚರರಿಗೆ ಹೆದರಿಸಿ ಶರಣಾಗುವಂತೆ ಮಾಡಿದ್ದಾಗಿ ಸಲೀಂ ಬಾಯಿ ಬಿಟ್ಟಿದ್ದಾನೆ.
ಅದೇ ರೀತಿ ಬಾಗೇಪಲ್ಲಿ, ತಲಘಟ್ಟಪುರ ಸೇರಿದಂತೆ ನಾನಾ ಭಾಗದಲ್ಲಿ ಕೊಲೆ-ಕೊಲೆಯತ್ನದಂತಹ ಪ್ರಕರಣದಲ್ಲಿ ಭಾಗಿಯಾಗಿರೊದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಕೇಸ್ ಮಾಡೋದು ಗೊತ್ತು ಫಿಟ್ ಆಗೋದು ಮಾತ್ರ ಗೊತ್ತಿಲ್ಲ ಬಾಂಬೆ ಸಲೀಂ ಸಿಸಿಬಿ ಅಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾನೆ. ಸದ್ಯ ಕೊಲೆ ಪ್ರಕರಣ ಸಂಬಂಧ ಸಲೀಂನನ್ನ ಸೋಲದೇವನಹಳ್ಳಿ ಪೊಲೀಸರು ಬಾಡಿ ವಾರೆಂಟ್ ಮೂಲಕ ಸಲೀಂ ನ ವಿಚಾರಣೆ ನಡೆಸ್ತಿದ್ದಾರೆ.
Kshetra Samachara
14/09/2022 09:46 pm