ಬೆಂಗಳೂರು: ಹೀಗೆ ಶವವಾಗಿ ಹಾಸಿಗೆಯ ಮೇಲೆ ಮಲಗಿರುವ ಮಹಿಳೆಯ ಹೆಸರು ಪ್ರಸನ್ನಕುಮಾರಿ. ಮೂಲತಃ ಆಂಧ್ರದ ವಿಜಯವಾಡದವರು. ಚಿಂತಾಮಣಿಯಲ್ಲಿ ಶಿಕ್ಷಕಿಯಾಗಿ ನಿವೃತ್ತಿ ಪಡೆದ ಪ್ರಸನ್ನಕುಮಾರಿ ತನ್ನ ಸ್ನೇಹಿತೆಯ ಅಂಬಾಭವಾನಿ ದೇವಸ್ಥಾನ ಹಿಂಭಾಗದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಳು. ಅದೇನಾಯ್ತೋ ಏನೋ ನಿನ್ನೆ (ಗುರುವಾರ) ಸಂಜೆ ಯಾರೊ ದುಷ್ಕರ್ಮಿಗಳು ಪ್ರಸನ್ನಕುಮಾರಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ, ಚಿನ್ನಾಭರಣ ಕಸಿದು ಪರಾರಿಯಾಗಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಿರುವ ವಿದ್ಯಾರಣ್ಯಪುರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ನಿನ್ನೆ ಸಂಜೆ ಕತ್ತಲಾದ ಮೇಲೆ ಪ್ರಸನ್ನಕುಮಾರಿ ಪಕ್ಕದ ಮನೆಯವರಿಗೆ ಒಂದು ಸಂಶಯ. ಕತ್ತಲಾದ ಕೂಡಲೇ ಪ್ರಸನ್ನ ಕುಮಾರಿ ಲೈಟ್ ಹಾಕುತ್ತಿದ್ದರು. 7 ಗಂಟೆಯಾದರೂ ಲೈಟ್ ಹಾಕಿಲ್ಲವಲ್ಲ ಎಂದು ಡೌಟ್ ಬಂದು ಮನೆಯೊಳಗೆ ಹೋಗಿ ನೋಡಿದಾಗ ಪ್ರಸನ್ನಕುಮಾರಿ ಕೊಲೆ ಕಂಡು ಬಂದಿದೆ. ಕೂಡಲೇ ಪ್ರಸನ್ನ ಕುಮಾರಿ ಸ್ನೇಹಿತೆ ಬಂದು ನೋಡಿ ದುರಂತದ ಬಗ್ಗೆ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಎಲ್ಲರೂ ಊಟ ಮಾಡಿ ಮಲಗುವ ವೇಳೆ ಬಂದಿರೋ ದುಷ್ಕರ್ಮಿಗಳು ಒಂಟಿಯಾಗಿದ್ದ ಪ್ರಶಾಂತ ಕುಮಾರಿ ಕೈಕಾಲು ಕಟ್ಟಿ, ಬಾಯಿಗೆ ಬಟ್ಟೆ ತುರುಕಿ, ಉಸಿರುಗಟ್ಟಿಸಿ ಕೊಲೆ ಮಾಡಿ ಎಸ್ಕೇಪ್ ಆಗಿದ್ದಾರೆ.
ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಪ್ರಶಾಂತ ಕುಮಾರಿ ಮೂಲತಹ ಆಂಧ್ರದ ವಿಜಯವಾಡದವರು. ವಿದ್ಯಾರಣ್ಯಪುರ ಪೊಲೀಸ್ ಠಾಣಾ ವ್ಯಾಪ್ತಿ ಅಂಬಾ ಭವಾನಿ ನಗರದಲ್ಲಿ ವಾಸವಾಗಿದ್ದರು. ಪ್ರಶಾಂತ ಕುಮಾರಿಗೆ ಮಕ್ಕಳಿರಲಿಲ್ಲ. ಪತಿ ಸಾವನ್ನಪ್ಪಿದ ಬಳಿಕ ಒಂಟಿಯಾಗಿ ವಾಸವಾಗಿದ್ದರು. ಈಕೆಗೆ ದೇವನಹಳ್ಳಿ ರಸ್ತೆ, ಕನಕಪುರ ರಸ್ತೆ ಮತ್ತು ಮೈಸೂರು ರಸ್ತೆಗಳಲ್ಲಿ ಸೈಟ್ ಆಸ್ತಿ ಮಾಡಿಟ್ಟಿದ್ದರು. ಅದರ ಕಬಳಿಕೆಗೆ ಪರಿಚಯಸ್ಥರೆ ಕೊಲೆ ಮಾಡಿರಬಹುದಾ ಅಥವಾ ಒಂಟಿ ಮಹಿಳೆ ಮನೆಲಿ ಚಿನ್ನಾಭರಣ ಮತ್ತು ಆಸ್ತಿ ಸಿಗಬಹುದೆಂಬ ಉದ್ದೇಶದಲ್ಲಿ ಕೊಲೆ ನಡೆದಿರಬಹುದಾ ಎನ್ನುವ ಆಯಾಮಗಳಲ್ಲು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಸುರೇಶ್ ಬಾಬು
ಪಬ್ಲಿಕ್ ನೆಕ್ಸ್ಟ್ ಯಲಹಂಕ.
PublicNext
09/09/2022 10:15 pm