ಬೆಂಗಳೂರು : ಈಶಾನ್ಯ ವಿಭಾಗದ ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿ ಅಟ್ಟೂರು ವಾರ್ಡಿಗೆ ಸೇರಿದ ಅಂಬಾಭವಾನಿ ದೇವಸ್ಥಾನದ ಬಳಿ ಒಂಟಿ ಮಹಿಳೆಯನ್ನು ಕೊಲೆ ಮಾಡಲಾಗಿದೆ. ಚಿನ್ನ ನಗನಾಣ್ಯ ದೋಚುವ ಉದ್ದೇಶದಿಂದ ದುಷ್ಕರ್ಮಿಗಳು ಪ್ರಸನ್ನಕುಮಾರಿ (61) ಎಂಬ ಮಹಿಳೆ ಕೈಕಾಲು ಕಟ್ಟಿಹಾಕಿ, ಉಸಿರುಗಟ್ಟಿಸಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ನಿನ್ನೆ ತಡರಾತ್ರಿ ಕೊಲೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಕೊಲೆಯ ನಂತರ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದಾರೆ. ಘಟನಾ ಸ್ಥಳಕ್ಕೆ ವಿದ್ಯಾರಣ್ಯಪುರ ಪೊಲೀಸರು ಭೇಟಿ ನೀಡಿ, ಆರೋಪಿಗಳಿಗಾಗಿ ಹುಡುಕಾಟ ಮುಂದುವರೆಸಿದ್ದಾರೆ.
ಕೊಲೆಯಾದ ಪ್ರಸನ್ನಕುಮಾರಿ ಶಿಕ್ಷಕಿಯಾಗಿದ್ದು, ಆಂದ್ರದ ವಿಜಯವಾಡ ಮೂಲದ ಪ್ರಸನ್ನ ಕುಮಾರಿ ಒಬ್ಬೊಂಟಿಯಾಗಿ ವಾಸವಿದ್ದ್ರುಚಿಂತಾಮಣಿಯ ಸರ್ಕಾರಿ ಶಾಲಾ ಶಿಕ್ಷಕಿಯಾಗಿ ಇತ್ತೀಚಿಗಷ್ಟೆ ಸೇವೆಯಿಂದ ಚಿನ್ನ ಸಭೆ. ಒಂಟಿಯಾಗಿ ಪ್ರಸನ್ನ ಕುಮರಿ ಜೀವನ ಸಾಗಿಸುತ್ತಿದ್ದರು. ನಿನ್ನೆ ಸಂಜೆ ವೇಳೆ ಆಗಂತುಕರು ಮನೆಗೆ ಬಂದು ಕೊಲೆಗೈದು ಪರಾರಿಯಾಗಿದ್ದಾರೆ.
Kshetra Samachara
09/09/2022 04:29 pm