ಬೆಂಗಳೂರು:ಸರಗಳ್ಳತ ಜೊತೆ ಖೋಟಾ ನೋಟುಗಳ ತಯಾರಿಕಾ ಜಾಲದಲ್ಲಿ ತೊಡಗಿದ್ದ ಇಬ್ಬರು ಕೇರಳ ಮೂಲದ ಆರೋಪಿಗಳನ್ನು ಜೆ.ಪಿ.ನಗರ ಪೊಲೀಸರು ಬಂಧಿಸಿದ್ದಾರೆ.ಕೇರಳ ಮೂಲದ ಪ್ರದೀಪ್ ಅಲಿಯಾಸ್ ಉನ್ನಿ ಮತ್ತು ಸನಲ್ ಬಂಧಿತ ಆರೋಪಿಗಳಾಗಿದ್ದಿ, ಬಂಧಿತರಿಂದ 3.19 ಲಕ್ಷ ರೂ ಮೌಲ್ಯದ 500 ಮತ್ತು 2 ಸಾವಿರ ಮುಖ ಬೆಲೆಯ ಖೋಟಾ ನೋಟುಗಳು ಹಾಗೂ 46 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.
ಆರೋಪಿಗಳು ಕೆಲ ವರ್ಷಗಳ ಹಿಂದೆ ಉದ್ಯೋಗ ಅರಸಿ ಬೆಂಗಳೂರಿಗೆ ಬಂದು ಬಸವನಪುರ ವಿಲೇಜ್ ನಲ್ಲಿ ವಾಸವಾಗಿದ್ದರು. ಇತ್ತೀಚೆಗೆ ಜೆ.ಪಿ. ಠಾಣೆ ವ್ಯಾಪ್ತಿಯಲ್ಲಿ Ashok ಕಂಪನಿ ಉದ್ಯೋಗಿ ಶಾಂತಿ ಎಂಬವರು ಮನೆಯ ಕಿಟಕಿ ಪಕ್ಕದ ಟೇಬಲ್ ಮೇಲೆ ಚಿನ್ನದ ಸರ ಇಟ್ಟು ಅಡುಗೆ ಮನೆಗೆ ಹೋಗಿದ್ದ ವೇಳೆ ಚಿನ್ನದ ಸರ ಕಳವು ಮಾಡಲಾಗಿತ್ತು.
ಚೆನ್ನಮ್ಮನ ಕೆರೆ ಅಚ್ಚುಕಟ್ಟು ಠಾಣೆ ವ್ಯಾಪ್ತಿಯಲ್ಲಿ ನಡೆದು ಹೋಗುತ್ತಿದ್ದ ಮಹಿಳೆಯ ಚಿನ್ನದ ಸರ ಕಳವು ಮಾಡಿ ಪರಾರಿಯಾಗಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಾಗ ಘಟನಾ ಸ್ಥಳದ ಸಿಸಿ ಕ್ಯಾಮೆರಾ ಮತ್ತು ಬಾತ್ಮೀದಾರರ ಮಾಹಿತಿ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದ್ದು,ಬಂಧಿತರ ವಿಚಾರಣೆ ವೇಳೆ ಛಾಪಾ ಕಾಗದಗಳ ಮೇಲೆ 500 ಮತ್ತು 2 ಸಾವಿರ ಮುಖ ಬೆಲೆಯ ನೋಟುಗಳನ್ನು ಕಲರ್ ಜೆರಾಕ್ ಸ್ ಮೂಲಕ ಮುದ್ರಿಸಿ ಅಸಲಿ ನೋಟುಗಳು ಎಂದು ಬದಲಾವಣೆ ಮಾಡುತ್ತಿದ್ದರು ಎಂಬುದು ಗೊತ್ತಾಗಿದೆ. ಈ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ.
ಸದ್ಯ ಲಕ್ಷಾಂತರ ರೂ. ಮೌಲ್ಯದ ಖೋಟಾ ನೋಟುಗಳನ್ನು ವಶಕ್ಕೆ ಪಡೆಯಲಾಗಿದೆ. ಅಲ್ಲದೆ, ಆರೋಪಿಗಳು ಕರ್ನಾಟಕ ಮಾತ್ರವಲ್ಲದೆ, ಕೇರಳದಲ್ಲೂ ಸರ ಕಳವು ಮತ್ತು ಮನೆ ಕಳ್ಳತನ ಮಾಡುತ್ತಿದ್ದು, ಪ್ರಕರಣ ದಾಖಲಾಗಿದೆ. ಕಳವು ಚಿನ್ನಾಭರಣಗಳನ್ನು ಕರಗಸಿ ಚಿನ್ನದ ಗಟ್ಟಿ ಗಳನ್ನಾಗಿ ಮಾಡಿ, ಬಂಗಾರದ ಅಂಗಡಿಗಳು ಮತ್ತು ಫೈನಾನ್ ಸ್ ಗಳಲ್ಲಿ ಅಡಮಾನ ಇಟ್ಟು ಮೋಜಿನ ಜೀವನ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Kshetra Samachara
08/09/2022 09:42 pm