ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಇಲ್ಲಿ ಗಂಡನನ್ನ ಕೊಂದು ಮಂಡ್ಯದಲ್ಲಿ ನಾಟಕವಾಡುತ್ತಿದ್ಳು ಐನಾತಿ ಹೆಂಡ್ತಿ

ಬೆಂಗಳೂರು: ಅನೈತಿಕ ಸಂಬಂಧವಿದೆ ಎಂದು ಪದೇ ಪದೇ ಅನುಮಾನಿಸುತ್ತಿದ್ದ ಗಂಡನನ್ನ ಅಕ್ಕನ ಮಗನ ಸಹಕಾರದಿಂದ ಬೆಂಗಳೂರಿನಲ್ಲಿ ಕೊಂದು ಶವವನ್ನ ಊರಿಗೆ ಕೊಂಡೊಯ್ದು ನಾಟಕವಾಡಿದ ಹೆಂಡತಿಯನ್ನ ಮಂಡ್ಯದಲ್ಲಿ ಬಂಧಿಸಲಾಗಿದೆ.

ಶಿಲ್ಪಾ ಬಂಧಿತ ಮಹಿಳೆಯಾಗಿದ್ದು ಆಕೆಯ ಪತಿ ಮಹೇಶ್ ಕೊಲೆಯಾದ ದುರ್ದೈವಿಯಾಗಿದ್ದಾನೆ.

ಮಂಡ್ಯ ಮೂಲದ ಮಹೇಶ್ ಮತ್ತು ಶಿಲ್ಪಾಗೆ ಎಂಟು ವರ್ಷಗಳ ಹಿಂದೆ ಮದುವೆಯಾಗಿತ್ತು. ಮದುವೆಯಾದ ಬಳಿಕ ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ದಂಪತಿ ವಾಸವಾಗಿದ್ದರು. ಇತ್ತೀಚಿಗೆ ಶಿಲ್ಪಾ ಬೆಂಗಳೂರಲ್ಲಿ ವಾಸವಿದ್ರೆ ಕೆಲಸದ ನಿಮಿತ್ತ ಮಹೇಶ್ ಮಂಡ್ಯದಲ್ಲಿ ವಾಸವಿದ್ದ. ಆಗಾಗ ಬೆಂಗಳೂರಿಗೆ ಬಂದು ಹೋಗ್ತಿದ್ದ ಮಹೇಶ್ ಬರುವಾಗಲೆಲ್ಲ ಕುಡಿದು ನಿನಗೆ ಅನೈತಿಕ ಸಂಬಂಧ ಇದೆ ಎಂದು ಶಿಲ್ಪಾಗೆ ಕಾಟ ನೀಡುತ್ತಿದ್ದ.

ಇದರಿಂದ ಬೇಸತ್ತ ಶಿಲ್ಪಾ ತನ್ನ ತಾಯಿ ಬಳಿ ಹೇಳಿಕೊಂಡಿದ್ದಳು. ಕಳೆದ ಗುರುವಾರವೂ ಶಿಲ್ಪಾಳನ್ನ ಭೇಟಿಯಾಗಲು ಬಂದು ಗಲಾಟೆ ಮಾಡುತ್ತಿದ್ದ ಅಳಿಯನಿಗೆ ಬುದ್ಧಿವಾದ ಹೇಳುವಂತೆ ಶಿಲ್ಪಾಳ ತಾಯಿ ತನ್ನ ಹಿರಿಯ ಮಗಳ ಮಗ ಬಾಲಾಜಿಗೆ ಹೇಳಿದ್ದಳು.

ಬುದ್ಧಿ ಹೇಳಲು ಬಂದಿದ್ದ ಬಾಲಾಜಿ ಸಿಟ್ಟಿನಿಂ ಮಹೇಶ್ ಮೇಲೆ ಮನಸೋ ಇಚ್ಚೆ ಹಲ್ಲೆ ಮಾಡಿದ್ದ. ಈ ವೇಳೆ ಮಹೇಶ್ ಮೃತಪಟ್ಟಿದ್ದ. ಬಳಿಕ ಮೂರ್ಛೆ ರೋಗದಿಂದ ಮಹೇಶ್ ಸಾವನ್ನಪ್ಪಿದ್ದಾನೆ ಎಂದು ಮೃತದೇಹವನ್ನು ಶಿಲ್ಪಾಳೆ ಆತನ ಹುಟ್ಟೂರಿಗೆ ತೆಗೆದುಕೊಂಡು ಹೋಗಿದ್ದಳು. ಅನುಮಾನಗೊಂಡ ಮಹೇಶ್ ಪೋಷಕರು ಮಂಡ್ಯ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು.

ಈ ವೇಳೆ ಪೊಲೀಸರು ವಿಚಾರಿಸಿದಾಗ ಅಸಲಿ ವಿಚಾರ ಬಯಲಾಗಿದೆ. ಸದ್ಯ ಕೊಲೆಗೆ ಸಹಕರಿಸಿದ ಶಿಲ್ಪಾ ಆಕೆಯ ತಾಯಿಯನ್ನ ವಶಕ್ಕೆ ಪಡೆದ ಮಂಡ್ಯ ಪೊಲೀಸರು ಪ್ರಕರಣವನ್ನ ಕೋಣನಕುಂಟೆ ಠಾಣೆಗೆ ವರ್ಗಾಯಿಸಿದ್ದಾರೆ. ಆರೋಪಿ ಬಾಲಾಜಿ ತಲೆಮರೆಸಿಕೊಂಡಿದ್ದು ಪತ್ನಿ ಶಿಲ್ಪಾ ಜೈಲು ಸೇರಿದ್ದಾಳೆ.

Edited By : Shivu K
PublicNext

PublicNext

04/09/2022 02:05 pm

Cinque Terre

31.92 K

Cinque Terre

6

ಸಂಬಂಧಿತ ಸುದ್ದಿ