ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಡಾಕ್ಟರ್ ಅಂತ ಬಂದು ಚಿನ್ನದಂಗಡಿಯಲ್ಲಿ ಕಳ್ಳತನ

ಜಯನಗರ: ಒಂದು ಕಡೆ ನಗರದಲ್ಲಿ ಸಾಲು ಸಾಲು ಚಿನ್ನದಂಗಡಿ ಕಳ್ಳತನ ಆಗ್ತಿದೆ. ಅದ್ರಲ್ಲೂ ನಗರದ ದಕ್ಷಿಣ ವಿಭಾಗದಲ್ಲಿ ಬನಶಂಕರಿ, ಜೆಪಿನಗರದ ನಂತರ ಇದೀಗ ಜಯನಗರದಲ್ಲಿ ಚಿನ್ನದಂಗಡಿ ಕಳ್ಳತನವಾಗಿದೆ. ಡಾಕ್ಟರ್ ಅಂತ‌ಹೇಳಿ ಚಿನ್ನದಂಗಡಿಗೆ ಬಂದಿದ್ದ ಈ ವ್ಯಕ್ತಿ ತಾನು ಅಪೋಲೋ ಆಸ್ಪತ್ರೆಯಲ್ಲಿ ವೈದ್ಯನೆಂದು ಪರಿಚಯ ಮಾಡಿಕೊಂಡಿದ್ದ. ಜಯ ನಗರದ 8ನೇ ಬ್ಲಾಕ್‌ನಲ್ಲಿ ಸೇಟ್ ಜ್ಯೂವೆಲ್ಲರಿ ಹೆಸ್ರಲ್ಲಿ ಹಲವಾರು ವರ್ಷಗಳಿಂದ ಚಿನ್ನದಂಗಡಿ ಇಟ್ಟುಕೊಂಡಿರೋ ಕಮಕಲಾಲ್ ಅಂಗಡಿಯಲ್ಲಿ ಕೃತ್ಯ ನಡೆದಿದ್ದು,

ಮೊದಲಿಗೆ ಅಂಗಡಿಯಲ್ಲಿ ಬೆಳ್ಳಿನಾಣ್ಯ ಖರೀದಿಸಿದ ಆರೋಪಿ ರಾಹುಲ್ ಬಳಿಕ ತನ್ನ‌ ತಂಗಿ ಮದುವೆಗೆ ಚಿನ್ನ ಬೇಕು ಅಂತ 32 ಗ್ರಾಂ‌ ತೂಕದ ಚಿನ್ನದ ನೆಕ್ಲೆಸ್, 75 ಗ್ರಾಂ ತೂಕದ ಲಾಂಗ್ ಚೈನ್, 22 ಗ್ರಾಂ ತೂಕದ ಬ್ರಾಸ್ ಲೈಟ್ ವ್ಯಾಪಾರ‌ ಮಾಡಿದ್ದ. ಬಳಿಕ‌ ತನ್ನ ಸಂಬಂಧಿಕರು ಹಣ ತರುತ್ತಾರೆಂದು ನಂಬಿಸಿದ ಸುಮಾರು‌ 2 ಗಂಟೆ ಕಾಲ ಅಂಗಡಿಯಲ್ಲಿ ಕಾಲ ಕಳೆದು, ಕಣ್ಣಲ್ಲೇ ತಾನು ಕದಿಯಬಹುದಾದ ವಸ್ತುಗಳ ಬಗ್ಗೆ ಸ್ಕೆಚ್ ಹಾಕಿದ್ದ‌.

ನಂತ್ರ ಬೆಳ್ಳಿಯ ಫೋಟೋ ಫ್ರೇಮ್ ಬೇಕು ಅಂತ‌ ಕೇಳಿ ಅಂಗಡಿಯವರು ಫ್ರೇಮ್ ತರಲು ಒಳಗೆ ಹೋದಾಗ ಕಳ್ಳ ಕೈಚಳಕ ತೋರಿದ್ದು, ರ್ಯಾಕ್ ನಲ್ಲಿಟ್ಟ ಒಡವೆ ಬಾಕ್ಸ್ ಸಮೇತ ಎಸ್ಕೇಪ್ ಆಗಿದ್ದಾನೆ. ಕಳ್ಳನ ಕೈಚಳಕದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Edited By : Shivu K
PublicNext

PublicNext

04/09/2022 11:32 am

Cinque Terre

39.51 K

Cinque Terre

0

ಸಂಬಂಧಿತ ಸುದ್ದಿ