ಬೆಂಗಳೂರು: ಹೆಗ್ಗನವಳ್ಳಿ ಕ್ರಾಸ್ ನೀಲಗಿರಿತೋಪಿನ ಬಳಿ ನಾಲ್ವರು ದುಷ್ಕರ್ಮಿಗಳಿಂದ ಮಾರ್ಷಲ್‌ಗಳ ಮೇಲೆ ಹಲ್ಲೆ ನಡೆದಿದೆ.
ನೀಲಗಿರಿತೋಪಿನ ಬಳಿ ಕಸ ಎಸೆಯುವವರಿಗೆ ದಂಡ ವಿಧಿಸುವ ವೇಳೆ ಈ ಘಟನೆ ಸಂಭವಿಸಿದೆ. ಆಟೋದಲ್ಲಿ ಬಂದು ನಾಲ್ವರು ಕಸ ಎಸೆಯುವ ವೇಳೆಯಲ್ಲಿ ಅವರನ್ನು ತಡೆದು ದಂಡ ವಿಧಿಸಲು ಮುಂದಾಗಿದ್ದಕ್ಕೆ ಬಿಬಿಎಂಪಿ ಮಾರ್ಷಲ್ಸ್ ಮೇಲೆ ಹಲ್ಲೆ ಮಾಡಿದ್ದಾರೆ. ವಿದ್ಯಾ ಹಾಗೂ ಸುರೇಂದ್ರ ಎಂಬುವರ ಮೇಲೆ ಹಲ್ಲೆ ನಡೆದಿದ್ದು, ಹಲ್ಲೆ ಮಾಡಿದ ಬಳಿಕ ಮಾರ್ಷಲ್ ಸುರೇಂದ್ರ ಕಾಲಿನ ಮೇಲೆ ಆಟೋ ರಿಕ್ಷಾ ಹತ್ತಿಸಲಾಗಿದೆ. ಈ ಬಗ್ಗೆ ಬಿಬಿಎಂಪಿ ಆರೋಗ್ಯ ಅಧಿಕಾರಿಯಿಂದ ಕಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
PublicNext
04/09/2022 09:49 am