ದಾಸರಹಳ್ಳಿ: ಸಾಲಗಾರರ ಕಾಟಕ್ಕೆ ಬೇಸತ್ತು ಜಿಮ್ ನಡೆಸುತ್ತಿದ್ದ ವ್ಯಕ್ತಿ ಆತ್ಮಹತ್ಯೆಮಾಡಿ ಕೊಂಡಿದ್ದಾನೆ. ನಗರದ ಕಮ್ಮಗೊಂಡನಹಳ್ಳಿ ಮುಖ್ಯರಸ್ತೆಯಲ್ಲಿ ಜಿಮ್ ನಡೆಸುತ್ತಿದ್ದ ಮನೋಹರ್ ಆತ್ಮಹತ್ಯೆ ಶರಣಾಗಿದ್ದಾನೆ.
ಸಾಲಗಾರರ ಹಿಂಸೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಡೆತ್‌ನೋಟ್ ಜೊತೆಗೆ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಿರುಕುಳದ ನೀಡಿದ ಆರೋಪದ ಮೇರೆಗೆ ಹರೀಶ್, ಮಂಜುನಾಥ್ ಪ್ರಸಾದ್, ರಾಜು, ಅಭಿ ಹಾಗೂ ನಾಗೇಶ್ವರ ರಾವ್ ವಿರುದ್ಧ ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಕೋವಿಡ್ ಲಾಕ್‌ಡೌನ್‌ನಿಂದ ಮನೋಹರ್ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದರು. ಬಡ್ಡಿ ಪಾವತಿ ಸಾಧ್ಯವಾಗಿರಲಿಲ್ಲ. ಸಾಲಗಾರರು ಬಡ್ಡಿ ಹಾಗೂ ಅಸಲಿನ ಹಣ ಮರು ಪಾವತಿಸುವಂತೆ ಕಿರುಕುಳ ನೀಡುತ್ತಿದ್ದರು. ಜಿಮ್ ನಡೆಸುತ್ತಿದ್ದ ಕಟ್ಟಡ ಮನೆಯ ಬಳಿಗೆ ಬಂದು ಗಲಾಟೆ ನಡೆಸುತ್ತಿದ್ದರು. ಸಾಲಗಾರರ ಹಿಂಸೆ ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡಿದ್ದು ಕಿರುಕುಳ ನೀಡಿದವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನೋಹರ್ ಸಹೋದರ ದೂರು ನೀಡಿದ್ದಾರೆ.
PublicNext
31/08/2022 07:38 pm