ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಸಾವಿನ ಮನೆಯಲ್ಲಿ ಮೌಢ್ಯದ ಕತೆ ಕಟ್ಟಿ ಲಕ್ಷ ಲಕ್ಷ ದೋಚಿದ ವಂಚಕ

ಬೆಂಗಳೂರು: ಮನೆಯಲ್ಲಿ ಒಂದು ಕಡೆ ಸಾವು ಸಂಭವಿಸಿ ದುಃಖದಲ್ಲಿದ್ರೆ ಇದನ್ನೆ ಬಂಡವಾಳ‌‌ ಮಾಡಿಕೊಂಡು ಮೌಢ್ಯದ ಮಾತನಾಡಿ, ಒಂದು ಸಾವಾಗಿರೋ ಮನೆಯಲ್ಲಿ ಮತ್ತೆ ಮೂರು ಸಾವಾಗುತ್ತೆ ಎಂದು ನಂಬಿಸಿ ಎರಡು ಲಕ್ಷ ಮೌಲ್ಯದ ಚಿನ್ನಾಭರಣ ಎಗರಿಸಿದ ಘಟನೆ ಜ್ಞಾನಭಾರತಿಯಲ್ಲಿ ನಡೆದಿದೆ‌.

ವರದರಾಜು ಎಂಬುವವರ ತಂದೆ ಇತ್ತೀಚೆಗೆ ಸಾವನ್ನಪ್ಪಿದ್ದರು. ಅವರ ಸಂಪ್ರದಾಯದ ಪ್ರಕಾರ 11 ದಿನ ಮನೆಯಲ್ಲಿ ದೀಪ ಹಚ್ಚಬೇಕು. ಹೀಗಾಗಿ ಮನೆಯಲ್ಲಿ ದೀಪ ಹಚ್ಚಿದ್ದನ್ನ‌ ನೋಡಿ ಮನೆಗೆ ಬಂದಿದ್ದ ಬುಡುಬುಡುಕೆ ದಾಸ ಈ ಮನೆಯಲ್ಲಿ ಮತ್ತೆ ಮೂರು ಸಾವಾಗುತ್ತೆ .ಎಂದು ಇರುಳು ಹೊತ್ತಿನಲ್ಲಿ ಹೇಳಿ ಹೋಗಿದ್ದ. ಇದನ್ನ ಕೇಳಿ ದಂಪತಿ ಬೆದರಿದ್ದರು. ನಂತರ ಮಾರನೆ ದಿನವೂ ಬಂದಿದ್ದ ಬುಡುಬುಡುಕೆಯವನು, ಮನೆಯಲ್ಲಿ ವರದರಾಜು ಪತ್ನಿ ಒಬ್ಬರೇ ಇರುವುದನ್ನ ನೋಡಿ ಮತ್ತೆ ಮೂರು ಸಾವಾಗುತ್ತೆ ಎಚ್ಚರ ಎಂದು ಬೆದರಿಸಿದ್ದ. ಎರಡನೇ ಬಾರಿ ಸಾವಿನ ವಿಚಾರ ಕೇಳಿದಾಗ ಭಯಗೊಂಡ ವರದರಾಜು ಪತ್ನಿ, ಬುಡುಬುಡಕೆಯವನನ್ನ ಮನೆಯೊಳಗೆ ಕರೆಸಿ ಮಾತನಾಡಿಸಿದ್ದಳು. ಈ ವೇಳೆ ಪೂಜೆ ಮಾಡಬೇಕು ಐದು ಸಾವಿರ ಆಗುತ್ತೆ ಎಂದಿದ್ದ ಬುಡುಬುಡುಕೆಯವನು. ಐದು ಸಾವಿರ ಕೊಟ್ಟ ಬಳಿಕ ವರದರಾಜು ಪತ್ನಿಗೆ ಕಪ್ಪು ಬೊಟ್ಟನ್ನ ಹಣೆಗೆ ಹಚ್ಚಿದ್ದ.

ಈ ಸಂಧರ್ಭದಲ್ಲಿ ಮೈಮೇಲಿದ್ದ ಒಡವೆಗಳ ಬುಡುಬುಡಕೆ ದಾಸ ಕೇಳಿದ್ದ. ಆಕೆಗೆ ಅರಿವಿಲ್ಲದಂತೆ ಅದನ್ನ ತೆಗೆದು ಕೊಟ್ಟಿದ್ರು. ಒಂದು ಚೈನ್ ಹಾಗೂ ಎರಡು ಉಂಗುರವನ್ನ ಬಿಚ್ಚಿ ಕೊಟ್ಟಿದ್ರು. ಇದೇ 12 ಗಂಟೆಯೊಳಗೆ ಪೂಜೆ ಮಾಡಿ ಕೊಡ್ತೀನಿ ಎಂದು ಹೇಳಿ ತನ್ನ ಹೆಸರು ಕೃಷ್ಣಪ್ಪ ಎಂದು ಹೇಳಿ ಫೋನ್ ನಂಬರ್ ಇಟ್ಟು ಹೋಗಿದ್ದ. ಪತಿ ವರದರಾಜು ಬಂದ ಬಳಿಕ ಅಸಲಿ ಸಂಗತಿ ತಿಳಿದು ಕೃಷ್ಣಪ್ಪನ ನಂಬರ್‌ಗೆ ಕರೆ ಮಾಡಿದರೆ ಅದು ಸ್ವಿಚ್ ಆಫ್ ಆಗಿತ್ತು. ಮೋಸ ಹೋಗಿರೋ ವಿಚಾರ ತಿಳಿಯುತ್ತಿದ್ದಂತೆ ಜ್ಞಾನಭಾರತಿ ಪೊಲೀಸರಿಗೆ ದೂರು ನೀಡಿದ್ರು. ದೂರು ಪಡೆದ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

28/08/2022 02:47 pm

Cinque Terre

2.78 K

Cinque Terre

0

ಸಂಬಂಧಿತ ಸುದ್ದಿ