ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು : ಪೊಲೀಸರ ಭರ್ಜರಿ ಕಾರ್ಯಚರಣೆ: ಗಾಂಜಾ ಗ್ಯಾಂಗ್ ಅರೆಸ್ಟ್, 27 ಕೆಜಿ ಗಾಂಜಾ ವಶಕ್ಕೆ

ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಆಂಧ್ರದಿಂದ ಸಾಗಾಟವಾಗ್ತಿದ್ದ 27 ಕೆ.ಜಿ ಗಾಂಜಾ ವಶಕ್ಕೆ ಪಡೆದು ಗಾಂಜಾ ಗ್ಯಾಂಗ್ ನ ಬಂಧಿಸಿ ಜೈಲಿಗಟ್ಟಿದ್ದಾರೆ.

ದೊಡ್ಡಬಳ್ಳಾಪುರದ ಸರ್ಕಲ್ ಇನ್ಸ್ ಪೆಕ್ಟರ್ ಹರೀಶ್ ರವರಿಗೆ ಗಾಂಜಾ ಮಾರಾಟದ ಸಣ್ಣದೊಂದು ಸುಳಿವು ಸಿಕ್ಕಿತ್ತು. ಅದೇ ಸುಳಿವಿನ ಮೇಲೆ ಬಸವ ಭವನ ಬಳಿ ಗಾಂಜಾ ಮಾರಾಟಕ್ಕೆ ಯತ್ನಿಸಿದ್ದ ಜಿಲಾನ್ ನನ್ನ ವಶಕ್ಕೆ ಪಡೆದ ಪೊಲೀಸರಿಗೆ ಆತನ ಬಳಿ 900 ಗ್ರಾಂ. ಗಾಂಜಾ ಸಿಕ್ಕಿತ್ತು. ವಿಚಾರಣೆ ನಡೆಸಿದಾಗ ಆಂಧ್ರ ಮತ್ತು ಒರಿಸ್ಸಾ ಗಡಿಭಾಗದಿಂದ ದೊಡ್ಡಬಳ್ಳಾಪುರಕ್ಕೆ ಗಾಂಜಾ ಸರಬರಾಜು ಆಗುತ್ತಿದ್ದ ಮಾಹಿತಿ ಬೆಳಕಿಗೆ ಬಂದಿದೆ.

ಜಿಲಾನ್ ನೀಡಿದ ಮಾಹಿತಿ ಮೇರೆಗೆ ನಗರದ ಡಿಕ್ರಾಸ್ ನಲ್ಲಿ ಚಂದ್ರಕೀರ್ತಿ ಅಲಿಯಾಸ್ ಆನೆಕಿವಿ ಎಂಬಾತನನ್ನ ವಶಕ್ಕೆ ಪಡೆದು ಅವನಿಂದ 12 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಜಿಲಾನ್ ಮತ್ತು ಚಂದ್ರಕೀರ್ತಿಯ ವಿಚಾರಣೆ ನಡೆಸಿದಾಗ ಗಾಂಜಾ ಗ್ಯಾಂಗ್ ನಲ್ಲಿದ್ದ ಮುನಿಕೃಷ್ಣ, ವರುಣ್ ಕುಮಾರ್ ಅಲಿಯಾಸ್ ಕೆಂಚ, ಹೇಮಂತ್ ಕುಮಾರ್ ಅಲಿಯಾಸ್ ಗುಂತ, ಪ್ರಬೀನ್ ಕಿಲ್ಲೋ, ತಬ್ರೇಜ್ ಅಲಿಯಾಸ್ ಡೋನು, ಶ್ರೇಯಸ್, ಚರಣ್ ಮತ್ತು ಆಲಶ್ ನನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.

ಕಾಲೇಜು ವಿದ್ಯಾರ್ಥಿಗಳನ್ನ ಟಾರ್ಗೆಟ್ ಮಾಡಿಕೊಂಡಿದ್ದ ಗಾಂಜಾ ಗ್ಯಾಂಗ್ ವ್ಯವಸ್ಥಿತವಾಗಿ ಗಾಂಜಾ ವ್ಯಸನಿಗಳಿಗೆ ಗಾಂಜಾ ಮಾರಾಟ ಮಾಡುತ್ತಿತ್ತು. ಗ್ಯಾಂಗ್ ನ ಕಿಂಗ್ ಪಿನ್ ಒರಿಸ್ಸಾದ ಪ್ರಬೀನ್ ಕಿಲ್ಲೋ ಒರಿಸ್ಸಾ ಮತ್ತು ಆಂಧ್ರಪ್ರದೇಶದ ಗಡಿಭಾಗದಿಂದ ಗಾಂಜಾ ಸಂಗ್ರಹಿಸುತ್ತಿದ್ದ. ಆಂಧ್ರದಿಂದ ಚಂದ್ರಕೀರ್ತಿ ದೊಡ್ಡಬಳ್ಳಾಪುರಕ್ಕೆ ತಂದು ಕೊಡುತ್ತಿದ್ದ. ನಂತರ ಗ್ಯಾಂಗ್ ನ ಸಹಚರರು ಸಣ್ಣ ಸಣ್ಣ ಗಾಂಜಾ ಪ್ಯಾಕೆಟ್ ಮಾಡಿ ದೊಡ್ಡಬಳ್ಳಾಪುರದ ಹೊಟೇಲ್, ಗ್ಯಾರೇಜ್, ಪೆಟ್ರೋಲ್ ಬಂಕ್, ಕಾಲೇಜ್ ಬಳಿ ಮಾರಾಟ ಮಾಡುತ್ತಿದ್ದರು. ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Edited By : Shivu K
PublicNext

PublicNext

24/08/2022 07:11 pm

Cinque Terre

24.77 K

Cinque Terre

0

ಸಂಬಂಧಿತ ಸುದ್ದಿ