ಹೊಸಕೋಟೆ: ಹಣ ಕೊಡಿಸಿದ ತಪ್ಪಿಗೆ ಬಡಪಾಯಿ ವ್ಯಕ್ತಿಯೊಬ್ಬರು ಕೊಲೆಯಾಗಿಯೇ ಹೋದರು! ಸಹಾಯ ಪಡೆದಾತ ಕೊಂದು ನಾಪತ್ತೆಯಾಗಿದ್ದ. ಪ್ರಕರಣ ದಾಖಲಿಸಿದ್ದ ಮಾರತ್ತಹಳ್ಳಿ ಪೊಲೀಸರು ಪಾಪಿ ಕೊಲೆಗಾರನನ್ನು ಕೋಲಾರದಲ್ಲಿ ಬಂಧಿಸಿದ್ದಾರೆ.
ಹೀಗೆ ಪೆಚ್ಚುಮೋರೆ ಹಾಕ್ಕೊಂಡಿರೋ ವ್ಯಕ್ತಿಯೇ ಕೊಲೆಗಾರ ಶಿವಪ್ಪ. ಕಳೆದ ಶನಿವಾರ ಮಾರತ್ತಹಳ್ಳಿಯ ಮುನ್ನೆಕೊಳಲಿನ ಪರ್ಲ್ ಅಪಾರ್ಟ್ಮೆಂಟ್ ಬಳಿ ಕ್ರಿಕೆಟ್ ಬ್ಯಾಟ್ ನಿಂದ ತನಗೆ ಸಾಲ ಕೊಡಿಸಿದ್ದ ಬಾಗೂರು ವೆಂಕಟೇಶಪ್ಪರ ತಲೆಗೆ ಹೊಡೆದು ಕೊಲೆಗೈದಿದ್ದ. ಪೊಲೀಸರು ಶಿವಪ್ಪನಿಗೆ ಹುಡುಕಾಟ ನಡೆಸಿದ್ದರು. ಕೊನೆಗೆ ಕೋಲಾರದಲ್ಲಿ ಶಿವಪ್ಪನನ್ನು ಮಾರತ್ತಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಗಂಭೀರ ಗಾಯವಾದ ಪರಿಣಾಮ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ವೆಂಕಟೇಶಪ್ಪರನ್ನು ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಭಾನುವಾರ ಸಾವನ್ನಪ್ಪಿದ್ದರು. ಸೋಮವಾರ ಹೊಸಕೋಟೆಯ ಸ್ವಗ್ರಾಮ ಬಾಗೂರಿನಲ್ಲಿ ಅಂತ್ಯಕ್ರಿಯೆ ನೆರವೇರಿತ್ತು. ಆಸರೆಯಾಗಿದ್ದ ವೆಂಕಟೇಶಪ್ಪರನ್ನು ಕಳೆದುಕೊಂಡ ಕುಟುಂಬ ಇದೀಗ ಕಂಗಾಲಾಗಿದೆ.
ಇದೀಗ ಕೊಲೆಗಾರ ಶಿವಪ್ಪನ ಬಂಧನವಾಗಿದೆ. ಕೊಲೆಯಲ್ಲಿ ಶಿವಪ್ಪನ ಹೆಂಡತಿ ಪಾತ್ರದ ಖಚಿತತೆ ಬಗ್ಗೆ ತನಿಖೆ ನಡೆಸುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
- ಸುರೇಶ್ ಬಾಬು, ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ
PublicNext
23/08/2022 08:43 pm