ಆನೇಕಲ್: ಸಮಂದೂರು ಗ್ರಾಮ ಪಂಚಾಯಿತಿಯ ಪಿಡಿಓ ಎಡವಟ್ಟಿನಿಂದಾಗಿ ಖಾತೆದಾರರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುವ ಘಟನೆ, ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸಮಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ .
ಇಲ್ಲಿನ ಸಮಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರನಾಯಕನಹಳ್ಳಿ ಎಂಬ ಗ್ರಾಮದಲ್ಲಿ ಸರ್ವೆ ನಂಬರ್ 86/3 ರಲ್ಲಿ ಲೇಟ್ ಮುನ್ವಿರಪ್ಪ ಮಕ್ಕಳಾದ ರಾಮಕೃಷ್ಣ, ಜೋತ್ಯಪ್ಪ, ಅಶ್ವತ್ ಗೆ ಎಂಟು ಗುಂಟೆ ಜಾಗ ಸೇರಿತ್ತು. ಆಗಿನ ಪಿಡಿಓ ಅಧಿಕಾರಿ ಸುಬಾನ್ ಖಾನ್ ಹಣ ತೆಗೆದುಕೊಂಡು 40 ರಿಂದ 60 ಅಡಿ ಜಾಗವನ್ನು ಮಾರನಾಯಕನಹಳ್ಳಿ ಗ್ರಾಮದ ನಿವಾಸಿಗಳಾದ ದೊಡ್ಡ ಪಾಪಣ್ಣ ಮಕ್ಕಳಾದ ಚಂದ್ರು ಶ್ರೀನಿವಾಸ್ ಗೋಪಾಲ್ ಎಂಬುವವರಿಗೆ ಅಕ್ರಮವಾಗಿ ದಾಖಲು ಮಾಡಿಕೊಟ್ಟಿದ್ದಾರೆ.
ಈ ಬಗ್ಗೆ ತಾಲೂಕು ಪಂಚಾಯಿತಿ ಇಓ ಲಕ್ಷ್ಮಿನಾರಾಯಣಸ್ವಾಮಿಗೆ ಜಮೀನಿನ ಮಾಲೀಕರು ದೂರು ಸಲ್ಲಿಕೆ ಮಾಡಿದ್ದಾರೆ..ಗ್ರಾಮ ಪಂಚಾಯಿತಿಯ ಪಿಡಿಓ ಅಧಿಕಾರಿ ಸುಬಾನ್ ಖಾನ್ ವಿರುದ್ದ ಮತ್ತು ಖಾತೆದಾರರ ವಿರುದ್ಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್, ಆನೇಕಲ್
PublicNext
22/08/2022 03:43 pm