ಬೆಂಗಳೂರು: ಇಷ್ಟು ದಿನ ಪುಂಡರು ವ್ಹೀಲಿಂಗ್ ಮಾಡಿ ರಸ್ತೆ ಸವಾರರಿಗೆ , ಸಂಚಾರಿ ಪೊಲೀಸರಿಗೆ ತಲೆನೋವಾಗಿದ್ದರು. ಈಗ ಪುಂಡರ ಜೊತೆ ಯುವತಿಯರೂ ಸಾಥ್ ನೀಡ್ತಿದ್ದಾರೆ. ನಗರದ ರಸ್ತೆಗಳಲ್ಲಿ ಈಗ ಯುವತಿಯರೂ ಹಾವಳಿ ನೀಡ್ತಿದ್ದು , ಸೈಯದ್ ಎಂಬಾತ ಹುಡುಗಿಯನ್ನ ಕೂರಿಸಿಕೊಂಡು ವ್ಹೀಲಿಂಗ್ ಮಾಡುತ್ತಿದ್ದ ವಿಡಿಯೋ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾನೆ . ಅಷ್ಟೆ ಅಲ್ಲದೇ ನಗರದ ರಸ್ತೆಗಳಲ್ಲಿ ಡ್ರ್ಯಾಗರ್ ಹಿಡಿದು ಜನರಲ್ಲಿ ಭಯ ಹುಟ್ಟು ಹಾಕುವ ಕೆಲಸ ಕೂಡ ನಡೆಯುತ್ತಿದೆ .
ಇಬ್ಬರು ಯುವಕರು ವ್ಹೀಲಿಂಗ್ ಮಾಡುತ್ತಾ ಡ್ರ್ಯಾಗರ್ ಹಿಡಿದು ರಸ್ತೆಯಲ್ಲಿ ಅವಾಂತರ ಸೃಷ್ಟಿ ಮಾಡುತ್ತಿದ್ದಾರೆ. ಬ್ಯಾರಿಕೇಡ್‌ಗಳನ್ನ ಒದ್ದು ಅದನ್ನೂ ಚಿತ್ರೀಕರಿಸಿ ಪೊಲೀಸರಿಗೆ ಇನ್ ಡೈರೆಕ್ಟ್ ಆಗಿ ಚ್ಯಾಲೆಂಜ್ ಹಾಕಿದ್ದಾರೆ. ಸಂಚಾರಿ ಪೊಲೀಸರು ಎಷ್ಟೇ ಕೇಸ್ , ಫೈನ್ ಹಾಕಿದ್ರು ಕೂಡ ಯಾವುದೇ ಪ್ರಯೋಜನ ಆಗಿಲ್ಲ. ಪೊಲೀಸರ ಭಯವೇ ಇಲ್ಲದೇ ಪುಂಡರು ಈ ರೀತಿ ಕೃತ್ಯವನ್ನ ಎಸಗುತ್ತಿದ್ದಾರೆ.
ಇನ್ನು ಪೊಲೀಸರು ಈ ಹಿಂದೆ ಕೂಡ ಸಾಕಷ್ಟು ಕ್ರಮವನ್ನ ಕೈಗೊಂಡಿದ್ದರು. ಆಲ್ಟ್ರೇಷನ್ ಮಾಡುವ ಗ್ಯಾರೇಜ್ ಗಳಿಗೂ ವಾರ್ನಿಂಗ್ ಕೊಟ್ಟಿದ್ರು , ಕೆಲವೊಂದು ಗ್ಯಾರೇಜ್‌ನ ಲೈಸೆನ್ಸ್ ಕೂಡ ಕ್ಯಾನ್ಸಲ್ ಮಾಡಿದ್ರು. ಆದ್ರೆ ಅದ್ಯಾವುದಕ್ಕೂ ಕ್ಯಾರೆ ಅನ್ನದೆ ವ್ಹೀಲಿಂಗ್ ಮಾಡೋದನ್ನ ಮುಂದುವರೆಸಿದ್ದಾರೆ. ಸದ್ಯ ಅಫೇನ್ಸ್‌ನ್ನೇ ರಾಜಾರೋಷವಾಗಿ ವಿಡಿಯೋ ಮಾಡಿ ಅದನ್ನ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿರುವ ಇಂತಹ ಕಿಡಿಗೇಡಿಗಳ ಮೇಲೆ ಸಂಚಾರಿ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
Kshetra Samachara
22/08/2022 01:29 pm