ಆನೇಕಲ್: ಕೆರೆಗಳು ಜನರ ಜೀವನಾಡಿ... ಹೀಗೆ ತುಂಬಿರುವ ಕೆರೆಗೆ ಕೈಗಾರಿಕೆಯೊಂದು ರಾತ್ರೋರಾತ್ರಿ ಕೆಮಿಕಲ್ ನೀರನ್ನು ಬಿಟ್ಟು ಸಂಪೂರ್ಣ ಕಲುಷಿತ ಮಾಡಿದ್ದಲ್ಲದೆ, ಅಂತರ್ಜಲ ಮಲಿನಕ್ಕೂ ಕಾರಣವಾಗಿದೆ! ಅಷ್ಟಕ್ಕೂ ಆ ಕೆರೆ ಯಾವುದು ಸ್ಟೋರಿ ನೋಡೋಣ...
ಒಂದು ಕಡೆ ರಸ್ತೆ ಉದ್ದಕ್ಕೂ ಹರಿಯುತ್ತಿರುವ ಕೆಮಿಕಲ್ ನೀರು, ಇತ್ತ ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ಜಂಟಿ ಕಾರ್ಯಚರಣೆ, ಈ ಚಿತ್ರಣ ಕಂಡು ಬಂದಿದ್ದು ಕಲ್ಲುಬಾಳು ಗ್ರಾಪಂ ವ್ಯಾಪ್ತಿಯ ಕೊನಸಂದ್ರ ಗ್ರಾಮದ ಖಾಸಗಿ ಕಂಪನಿಯಲ್ಲಿ. ಕೊನಸಂದ್ರ ಗ್ರಾಮದ ಸಿಡಿವೈ ಮ್ಯಾಕ್ಸ್ ಕಂಪನಿ ರಸ್ತೆ ತುಂಬೆಲ್ಲ ರಾತ್ರೋರಾತ್ರಿ ಕೆಮಿಕಲ್ ನೀರು ಬಿಟ್ಟಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡೇ ಓಡಾಡುವ ಪರಿಸ್ಥಿತಿ ಎದುರಾಗಿದೆ.
ಈ ಬಗ್ಗೆ ಕಂಪನಿ ಮಾಲೀಕರಿಗೆ ಪ್ರಶ್ನೆ ಮಾಡಿದ್ರೆ ಉಡಾಫೆ ಉತ್ತರ ನೀಡಿದ್ದಾರೆ. ಅಲ್ಲದೆ, ಈ ಸಿಡಿವೈ ಮ್ಯಾಕ್ಸ್ ಕಂಪನಿಯಲ್ಲಿ ಹೆಸರಿಗೆ ಮಾತ್ರ ಮಳೆ ನೀರು ಸಂಗ್ರಹ. ಆದರೆ, ಅದರಲ್ಲೆಲ್ಲ ಕೆಮಿಕಲ್ ನೀರು ಮತ್ತು ಶೌಚಕ್ಕೆ ಬಳಸಿದ ನೀರನ್ನು ಗಿಡಗಳಿಗೆ ನೀಡ್ತಿದ್ರಂತೆ. ಇನ್ನು, ಮಾಹಿತಿ ತಿಳಿದ ಜಿಗಣಿ ಭಾಗದ ಪರಿಸರ ಮಾಲಿನ್ಯ ಜಂಟಿ ಅಧಿಕಾರಿ ರಾಜೇಶ್ ಹಾಗೂ ಸಿಬ್ಬಂದಿ ಕಾರ್ಖಾನೆಯಲ್ಲಿ ನಡೆಯುತ್ತಿದ್ದ ಆಕ್ರಮ ಬಿಚ್ಚಿಟ್ಟಿದ್ದಾರೆ. ಈ ವೀಡಿಯೊವನ್ನು ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಚಿತ್ರೀಕರಿಸಿ ಪಬ್ಲಿಕ್ ನೆಕ್ಸ್ಟ್ ಗೆ ನೀಡಿದ್ದಾರೆ.
ಈ ಕಾರ್ಖಾನೆಯ ತ್ಯಾಜ್ಯ ನೀರು ಮತ್ತು ಕಲುಷಿತ ಕೆಮಿಕಲ್ ನೀರನ್ನು ಚರಂಡಿ ಮೂಲಕ ಕೆರೆಗೆ ಹರಿಸಲಾಗುತ್ತಿದೆ. ಚರಂಡಿ ಮೇಲೆ ಸ್ಲಾಬ್ ಹಾಕಿ ಯಾರಿಗೂ ತಿಳಿಯದ ಹಾಗೆ ರಾತ್ರೋರಾತ್ರಿ ಪೈಪ್ ಮೂಲಕ ಚರಂಡಿಗೆ ಬಿಡಲಾಗುತ್ತಿದೆ. ಈ ಕೆಮಿಕಲ್ ನೀರನ್ನು ಶೇಖರಿಸಿ ಲ್ಯಾಬ್ ಗೆ ಕಳಿಸಲಾಗಿದೆ ಎಂದು ಪರಿಸರ ಮಾಲಿನ್ಯ ಅಧಿಕಾರಿ ರಾಜೇಶ್ ಮಾಹಿತಿ ನೀಡಿದರು.
- ಹರೀಶ್ ಗೌತಮನಂದ, ಪಬ್ಲಿಕ್ ನೆಕ್ಸ್ಟ್ ಆನೇಕಲ್
PublicNext
22/08/2022 01:01 pm