ನೆಲಮಂಗಲ: ಮೊದಲ ಪತಿಯ ಸಾವಿನ ಬಳಿಕ ಎರಡನೇ ಪತಿ ಸಂಬಂಧ ಡಿವೋರ್ಸ್‌ನಲ್ಲಿ ಮುರಿದು ಬಿದ್ದಿತ್ತು. ಬಳಿಕ ಆಕೆ ಮತ್ತಿಬ್ಬರೊಂದಿಗೆ ಅಕ್ರಮ ಸಂಬಂಧ ಹೊಂದಿದ್ಲು. ಆದ್ರೆ ಆಕೆಯೊಂದಿಗಿದ್ದ ನಾಲ್ಕನೇಯವನ ಸಂಬಂಧಕ್ಕೆ ಎಲ್ಲಿ ತೊಡಕಾಗ್ತಾನೆಂದು ತಿಳಿದು ಆ ಲೇಡಿ ಪ್ರಿಯಕರನೊಂದಿಗೆ ಸೇರಿ ಕೊಲೆಗೈದ್ದಾರೆ. ಕೊಲೆಯಾಗಿ 50 ದಿನಗಳ ಬಳಿಕ ಅಸ್ತಿಪಂಜರ ಪತ್ತೆಯಾಗಿದ್ದು, ಆ ಐನಾತಿ ಲೇಡಿ ಹಾಗೂ ಪ್ರಿಯಕರ ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಈ ದೃಶ್ಯಗಳೆಲ್ಲಾ ಕಂಡು ಬಂದಿದ್ದು ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲ್ಲೂಕಿನ ಕಳಲುಘಟ್ಟ ಗ್ರಾಮದಲ್ಲಿ. ಹೌದು. ಕಳೆದ ಜುಲೈ 2ರಂದು ತುಮಕೂರಿನ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳಾದ ಲಕ್ಷ್ಮಿ ಹಾಗೂ ವೆಂಕಟೇಶ್ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ. ಈ ಇಬ್ಬರು ಒಟ್ಟಿಗೆ ಸೇರ್ಕೊಂಡು ದೊಡ್ಡಲಿಂಗಪ್ಪ ಎಂಬಾತನನ್ನ ಕೊಲೆಗೈದು ನೆಲಮಂಗಲದ ಕಳಲುಘಟ್ಟ ಬ್ರಿಡ್ಜ್ ಕೆಳಗಿನ ಹಳ್ಳಕ್ಕೆ ಬಿಸಾಕಿ ಹೋಗಿದ್ರು.
ಆರೋಪಿ ಲಕ್ಷ್ಮಿ ಹಾಗೂ ಮೃತ ದೊಡ್ಡಲಿಂಗಪ್ಪ ಎಲ್ಲರೂ ರಾಯಚೂರು ಮೂಲದವರು, ಇವರೆಲ್ಲಾ ತುಮಕೂರು ನಗರದ ಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೋಶಾಲೆಯಲ್ಲಿ ಕೆಲಸ ಮಾಡ್ಕೊಂಡು ವಾಸವಿತ್ತಿದ್ದರು. ಈ ಹಿಂದೆ ಆರೋಪಿ ಲಕ್ಷ್ಮಿ ಮದುವೆಯಾದ ಮೊದಲ ಗಂಡ ಸಾವನ್ನಪ್ಪಿದ್ದ, 2ನೇ ಗಂಡ ಡಿವೋರ್ಸ್ ನೀಡಿದ್ದ. ಇನ್ನು ದೊಡ್ಡಲಿಂಗಪ್ಪನೊಂದಿಗೆ ಅಕ್ರಮ ಸಂಬಂಧ ಇಟ್ಕೊಂಡಿದ್ದು, ಅವನನ್ನ ಹೊರತುಪಡಿಸಿ ಮತ್ತೋರ್ವ ಪ್ರಿಯಕರ ಆರೋಪಿ ವೆಂಕಟೇಶ್ ನೊಂದಿಗೂ ಅನೈತಿಕ ಸಂಬಂಧ ಬೆಳೆಸಿಕೊಂಡಿದ್ದಳಂತೆ.
ಇನ್ನು ದೊಡ್ಡಲಿಂಗಪ್ಪ ಹಾಗೂ ಆರೋಪಿ ಲಕ್ಷ್ಮಿ ತಂದೆ ಇಬ್ಬರೂ ಸ್ನೇಹಿತರಂತೆ. ದೊಡ್ಡಲಿಂಗಪ್ಪ ಲಕ್ಷ್ಮಿ ತಂದೆಗೆ ಸಾಲವಾಗಿ 30 ಸಾವಿರ ಹಣ ಕೊಟ್ಟಿದ್ನಂತೆ. ಹಣ ವಾಪಸ್ ಪಡೆಯುವ ಸಲುವಾಗಿ ಲಕ್ಷ್ಮಿ ಮನೆಗೆ ಆಗಾಗ ತೆರಳುತ್ತಾ ಲಕ್ಷ್ಮಿ ಜೊತೆಗೆ ಅಕ್ರಮ ಸಂಬಂಧ ಬೆಳೆಯಿತು ಎನ್ನಲಾಗುತ್ತಿದೆ. ಅಷ್ಟೆ ಅಲ್ಲ ಪ್ರಿಯಕರ ವೆಂಕಟೇಶ್‌ನೊಂದಿಗೂ ಈಕೆಗೆ ಅಕ್ರಮ ಸಂಬಂಧ ಇರುವುದು ತನಿಖೆಯಿಂದ ಬೆಳಕಿಗೆ ಬಂದಿದೆ. ಇತ್ತ ದೊಡ್ಡಲಿಂಗಯ್ಯ ಹಣಕಾಸಿನ ವಿಚಾರದಲ್ಲಿ ಲಕ್ಷ್ಮಿ ಕುಟುಂಬಕ್ಕೆ ನಿರಂತರ ಕಿರುಕುಳ ಕೊಡುತ್ತಿದ್ದ. ಅಲ್ಲದೆ ಪ್ರಿಯಕರ ವೆಂಕಟೇಶ್ ಮತ್ತವಳ ಸಂಬಂಧಕ್ಕೆ ಎಲ್ಲಿ ದೊಡ್ಡಲಿಂಗಪ್ಪ ಮುಳ್ಳಾಗ್ತಾನೋ ಎಂಬ ಕಾರಣಕ್ಕೆ ಇವನನ್ನ ಮುಗುಸಿಬಿಡಬೇಕು ಅಂತ ಪ್ಲಾನ್ ಮಾಡಿ ಜುಲೈ 2ರಂದು ಮನೆಗೆ ಕರೆಸ್ಕೊಂಡು, ಕಂಠ ಪೂರ್ತಿ ಕುಡಿಸಿ ಆತನ ತಲೆ ಮೇಲೆ ಕಲ್ಲು ಎತ್ತು ಹಾಕಿ ಕೊಂದಿದ್ದಲ್ಲದೆ, ಆತನ ಬೈಕ್‌ನಲ್ಲೇ ಮೃತದೇಹ ಸಾಗಿಸಿ ಕಳಲುಘಟ್ಟದ ಹಳ್ಳಕೆ ಎಸೆದಿದ್ದಾರೆ. ಬಳಿಕ ಬೈಕನ್ನು ತುಮಕೂರು ಹೊನ್ನುಡಿಕೆ ಕೆರೆಯಲ್ಲಿ ಬಿಟ್ಟು ಹೋಗಿರುವುದಾಗಿ ತನಿಖೆ ವೇಳೆ ತಿಳಿದು ಬಂದಿದೆ.
ಸದ್ಯ ಘಟನೆ ಸಂಬಂಧ ಆರೋಪಿಗಳನ್ನ ಬಂಧಿಸಿರುವ ಪೊಲೀಸರು ಕಳಲುಘಟ್ಟದ ಹಳ್ಳದಲ್ಲಿ ಮೃತನ ಕಳೆಬರಹ ವಶಕ್ಕೆ ಪಡೆದು ತನಿಖೆಗೆ ಮುಂದಾಗಿದ್ದಾರೆ.
Kshetra Samachara
22/08/2022 11:24 am