ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕಾರುಗಳು ನಡುವೆ ಮುಖಾಮುಖಿ ಡಿಕ್ಕಿ; ಸ್ಥಳದಲ್ಲೇ ಇಬ್ಬರ ಸಾವು, ಮೂವರ ಸ್ಥಿತಿ ಗಂಭೀರ

ಹೊಸಕೋಟೆ: ಕೋಲಾರ ಸಮೀಪದ ಮುರುಗುಮಲ್ಲ ದೇವಸ್ಥಾನಕ್ಕೆ ತೆರಳಿ ವಾಪಸ್ ಆಗುತ್ತಿದ್ದ ವೇಳೆ ಎರಡು ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೆ ಕೃಷ್ಣರಾಜಪುರ ಸಮೀಪದ ಶಾಜಿಯಾ ಭಾನು (26) ಇಬ್ರಾಹಿಂಸಾಬ್ ಎಂಬ ಒಂದೇ ಕುಟುಂಬದ ಇಬ್ಬರು ಮೃತಪಟ್ಟಿದ್ದಾರೆ. ಇನ್ನಿಬ್ಬರಿಗೆ ಗಂಭೀರ ಗಾಯಗಳಾದ ದುರಂತ ಘಟನೆ ರಾತ್ರಿ ನಡೆದಿದೆ.

ಬೈಲನರಸಾಪುರ ಮಾರ್ಗವಾಗಿ ಕೋಲಾರ ರಸ್ತೆ ಮುಖಾಂತರ ಕೆ.ಆರ್ ಪುರಕ್ಕೆ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ. ಹೊಸಕೋಟೆ ಪೊಲೀಸ್ ಠಾಣೆ ವ್ಯಾಪ್ತಿ ಅಟ್ಟೂರು ಗೇಟ್ ಬಳಿ ಕಟೈಂನರ್ ಲಾರಿನ ಓವರ್ ಟೇಕ್ ಮಾಡಲು ಹೋಗಿ ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದೆ.

ಒಟ್ಟು ಮೂರು ಕಾರುಗಳಲ್ಲಿ ಕೃಷ್ಣರಾಜಪುರದ 9 ಜನ ಪ್ರಯಾಣಿಸುತ್ತಿದ್ದರು ಎನ್ನಲಾಗುತ್ತಿದೆ. ಒಂದು ಕಾರು ಅಪಘಾತದಿಂದ ಬಚಾವ್ ಆಗಿದೆ. ಮೃತರ ಶವಗಳನ್ನು ಎಂವಿಜೆ ಆಸ್ಪತ್ರೆಲಿ ಇಡಲಾಗಿದ್ದು, ಗಾಯಾಳುಗಳ ಚಿಕಿತ್ಸೆ ಮುಂದುವರೆಸಲಾಗಿದೆ.

ದುರಂತ ಸ್ಥಳಕ್ಕೆ ಡಿವೈಎಸ್‌ಪಿ ಉಮಾಶಂಕರ್ ಹಾಗೂ ಹೊಸಕೋಟೆ ಇನ್ಸ್‌ಪೆಕ್ಟರ್ ಮಂಜುನಾಥ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.

ಸುರೇಶ್ ಬಾಬು ಪಬ್ಲಿಕ್ ನೆಕ್ಸ್ಟ್ ಹೊಸಕೋಟೆ..

Edited By : Shivu K
PublicNext

PublicNext

22/08/2022 10:45 am

Cinque Terre

34.56 K

Cinque Terre

0

ಸಂಬಂಧಿತ ಸುದ್ದಿ