ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಕೊವಿಡ್‌ನಲ್ಲಿ ಕೆಲಸ ಕಳೆದು ಕೊಂಡ ವ್ಯಕ್ತಿ; ಹಣ ಮಾಡಲು ಕಳ್ಳತನ ದಾರಿ ಹಿಡಿದ

ಬೆಂಗಳೂರು: ಕೊವಿಡ್ ನಿಂದ ಕೆಲಸ ಕಳೆದುಕೊಂಡಿದ್ದ ವ್ಯಕ್ತಿ ಹಣ ಸಂಪಾದನೆಗೆ ಕಳ್ಳತನ‌ದ ಹಾದಿ ಹಿಡಿದಿದ್ದ. ಅದೂ ದೆಹಲಿಯಿಂದ ಬೆಂಗಳೂರಿಗೆ ಫ್ಲೈಟ್ ನಲ್ಲಿ ಬಂದು ಚಿನ್ನ ಕಳವು ಮಾಡ್ತಿದ್ದ ಚಾಲಾಕಿ ಕಳ್ಳನನ್ನ ಸದ್ಯ ಜಯನಗರ ಪೊಲೀಸ್ರು ಬಂಧಿಸಿದ್ದಾರೆ.

ರಾಹುಲ್ ಯಾದವ್ ಬಂಧಿತ ಆರೋಪಿಯಾಗಿದ್ದು, ಬಿಎಸ್ ಸಿ ಪದವಿಧನಾಗಿರುವ ರಾಹುಲ್ ಆಗಾಗ ಬೆಂಗಳೂರಿಗೆ ಬಂದು ಚಿನ್ನದ ಅಂಗಡಿಗಳಲ್ಲಿ ಕಳವು ಮಾಡ್ತಿದ್ದ. ದೆಹಲಿಗಿಂತ ಬೆಂಗಳೂರಿನಲ್ಲಿ ಕಳವು ಮಾಡೋದು ಸುಲಭ ಅಂತ ಇಲ್ಲಿಗೆ ಬರ್ತಿದ್ದ ಆರೋಪಿ ಚಿನ್ನ ಕಳವು ಮಾಡ್ತಿದ್ದಂತೆ ಫ್ಲೈಟ್ ಹತ್ತಿ ದೆಹಲಿಗೆ ಪರಾರಿಯಾಗ್ತಿದ್ದ.

ದೆಹಲಿಯಲ್ಲಿ ಚಿನ್ನ ಮಾರಿ ತನ್ನ ಪತ್ನಿಯ ಅಕೌಂಟ್ ಗೆ ಹಣ ಹಾಕ್ತಿದ್ದ ಯಾದವ್, ಕಡಿಮೆ ಜನ ಹಾಗೂ ಒಬ್ಬರೇ ಸೇಲ್ಸ್ ಬಾಯ್ ಇರುವ ಚಿನ್ನದ ಅಂಗಡಿಗಳನ್ನೇ ತನ್ನ ಕೃತ್ಯಕ್ಕೆ ಬಳಸಿಕೊಳ್ತಿದ್ದ‌. ಚಿನ್ನ ಖರೀದಿಸುವ ನೆಪದದಲ್ಲಿ ಗ್ರಾಹಕನಂತೆ ನಟಿಸಿ ಅಂಗಡಿಯವರ ಗಮನ ಬೇರೆಡೆ ಸೆಳೆದು ಚಿನ್ನ ಕದ್ದು ಪರಾರಿಯಾಗ್ತಿದ್ದ. ಬೆಂಗಳೂರಿನ ಜಯನಗರ ಹಾಗೂ ಮಲ್ಲೇಶ್ವರದಲ್ಲಿನ ಅಂಗಡಿಗಳಲ್ಲಿ 230 ಗ್ರಾಂ ಚಿನ್ನ ಕಳವು ಮಾಡಿದ್ದ ಆರೋಪಿಯ ಕೃತ್ಯ ಸಿಸಿಟಿವಿಯಲ್ಲೂ ಕೂಡ ಸೆರೆತಾಗಿತ್ತು. ಸದ್ಯ ಬಂಧಿತನಿಂದ 120 ಗ್ರಾಂ ಚಿನ್ನ ಹಾಗೂ 7 ಲಕ್ಷ ಹಣ ಸೀಜ್ ಮಾಡಿ ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.

Edited By : Shivu K
PublicNext

PublicNext

20/08/2022 11:49 am

Cinque Terre

28.1 K

Cinque Terre

1

ಸಂಬಂಧಿತ ಸುದ್ದಿ