ಬೆಂಗಳೂರು : ನ್ಯಾಯ ಬೇಕು ಅಂತಾ ವ್ಯಕ್ತಿಯೊಬ್ಬ ಹೈಟೆನ್ಷನ್ ಟವರ್ ಏರಿ ಸೀನ್ ಕ್ರಿಯೇಟ್ ಮಾಡಿದ್ದಾನೆ.ಅವಲಹಳ್ಳಿಯ ಎಸ್.ಎಮ್.ಆರ್ ಲೇ ಔಟ್ ನಲ್ಲಿ ಇಂದು ಸಂಜೆ ಈ ಘಟನೆ ನಡೆದಿದ್ದು, ವ್ಯಕ್ತಿಯ ಮನವಲಿಸಲು ಅವಲಹಳ್ಳಿ ಪೊಲೀಸ್ರು ಹರಸಾಹಸ ಪಟ್ಟಿದ್ದಾರೆ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿಯನ್ನ ಕರೆಸಿ,ಹೈಟೆನ್ಷನ್ ಕಂಬ ಏರಿ ಕುಳಿತಿದ್ದ ಅನಂತ ಕುಮಾರ್ ಮನವೊಲಿಸಿದ್ದಾರೆ.ಆನೇಕಲ್ ಮೂಲದವನಾಗಿರೊ ಅನಂತ ಕುಮಾರ್ ಗೆ ತಮಿಳುನಾಡು ಪೊಲೀಸರು ವಿನಾಕಾರಣ ದೂರು ದಾಖಲಿಸಿ ಅನ್ಯಾಯ ಮಾಡಿದ್ದಾರೆ.
ನನಗೆ ನ್ಯಾಯ ಕೊಡಿಸಿ ಅಂತ ಹೈಟೆನ್ಷನ್ ಕಂಬ ಏರಿ ಅನಂತ ಕುಮಾರ್ ಹುಚ್ಚಾಟ ತೋರಿದ್ದ. ಸ್ಥಳೀಯರು ಎಷ್ಟೇ ಮನವೊಲಿಸಿದ್ರು ಕೆಳಗಿಳಿಯದ ಅನಂತನನ್ನು ಕೆಳಗಿಳಿಸಲು ಪೊಲೀಸ್ರು ಪವರ್ ಆಫ್ ಮಾಡಿಸಿ ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ನ್ಯಾಯ ಕೊಡಿಸುವ ಭರವಸೆ ಕೊಟ್ಟು ಕೆಳಗಿಳಿಸಿದ್ದಾರೆ.
Kshetra Samachara
19/08/2022 10:50 pm