ಬೆಂಗಳೂರು: ಅವರೆಲ್ಲರೂ ವಾಟ್ಸ್ ಆ್ಯಪ್ ನಲ್ಲಿ ಡಿಪಿ ಹಾಕೋ ವಿಚಾರಕ್ಕೆ ಕಿರಿಕ್ ಮಾಡಿಕೊಂಡಿದ್ರು. ಇದು ಅಷ್ಟಕ್ಕೆ ಸುಮ್ಮನಾಗದೇ ಬಾಸ್ ಅಂತ ಸ್ಟೇಟಸ್ ಹಾಕೋ ವಿಚಾರಕ್ಕೆ ಮನೆಗೆ ನುಗ್ಗಿ ಲಾಂಗ್ ಬೀಸೋ ಮಟ್ಟಕ್ಕೆ ಹೋಗಿತ್ತು. ಆದ್ರೆ ನಸೀಬ್ ಕೈ ಕೊಟ್ಟು ಲಾಂಗ್ ಹಿಡಿದು ಆಟ್ಯಾಕ್ ಮಾಡಿದ ಪುಂಡರಿಗೆ ಮಚ್ಚಿನೇಟು ಬಿದ್ದಿದೆ.
ಮಗನ ಮೇಲೆ ಲಾಂಗ್ ಬೀಸೋಕೆ ಬಂದ ಪುಂಡರ ಮೇಲೆ ತಂದೆ ಎರಗಿ ಬಿದ್ದಿದ್ದಾರೆ. ಸದ್ಯ ಇಂತಹದೊದ್ದು ಭಯಾನಕ ಘಟನೆ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಮಹದೇಶ್ವರ ನಗರದಲ್ಲಿ ನಡೆದಿದೆ.
ಸ್ವಾತಂತ್ರ್ಯ ದಿನದಂದು ನಡೆದ ಈ ಘಟನೆ ನೋಡಿದ ಏರಿಯಾ ಜನ ಬೆಚ್ಚಿ ಬಿದ್ದಿದ್ದಾರೆ. ಇನ್ನೂ ಘಟನೆಗೆ ಕಾರಣ ಅಕ್ಷಯ್ ಸ್ನೇಹಿತರು ಅಕ್ಷಯ್ ಫೋಟೋಗೆ ಬಾಸ್ ಅಂತ ಟ್ಯಾಗ್ ಮಾಡಿ ಸ್ಟೇಟಸ್ ಹಾಕೊಂಡಿದ್ರು. ಇದಕ್ಕೆ ಗಣಿ ಸುಮಂತ ವಿರೋಧ ವ್ಯಕ್ತಪಡಿಸಿ ನಾವ್ ಬಾಸ್ ನಮ್ಮ ಫೋಟೋ ಹಾಕೋಳೋ ಅಂತ ವಾರ್ನ್ ಮಾಡಿದ್ರು. ಸಾಲದಕ್ಕೆ ರೌಡಿ ಶೀಟರ್ ಹೆಸ್ರು ಕೂಡ ಬಳಸಿದ್ರಂತೆ.
ಇದಾದ ನಂತರ ಅಕ್ಷಯ್ ಕ್ರಿಕೆಟ್ ಗ್ರೌಂಡ್ ನಲ್ಲಿ ಸಿಕ್ಕಾಗ ಬೈಕ್ ಕೀ ಯಿಂದ ಹಲ್ಲೆ ನಡೆಸಿದ್ರಂತೆ.
ಇಷ್ಟಕ್ಕೆ ಸುಮ್ಮನಾಗದ ಗಣಿ, ಸುಮಂತ್ ಇನ್ನಿಬ್ಬರ ಹುಡುಗರನ್ನ ಹಾಕೊಂಡು ಎರಡು ಲಾಂಗ್ ಹಿಡಿದು ಅಕ್ಷಯ್ ಮುಗಿಸಲು ಅಕ್ಷಯ್ ಮನೆಗೆ ನುಗ್ಗಿದ್ದಾರೆ.
ಮನೆಯಲ್ಲಿ ಅಕ್ಷಯ್ ತಂದೆ ಆನಂದ್ ರಾಮ್ ಮತ್ತು ತಾಯಿ ಇರೋವಾಗ್ಲೆ ಮಚ್ಚು ಬೀಸೋಕೆ ಮುಂದಾಗಿದ್ರು.ಈ ಸಮಯದಲ್ಲಿ ಅಕ್ಷಯ್ ತಂದೆ ಆನಂದ್ ರಾಮ್ ಗಣಿ ಸುಮಂತ್ ತಂದಿದ್ದ ಮಚ್ಚು ಕಿತ್ತುಕೊಂಡು ಅವರ ಮೇಲೆ ಬೀಸಿದ್ದಾರೆ.
ಘಟನೆಯಲ್ಲಿ ಸುಮಂತ್ ಗೆ ಗಂಭೀರಗಾಯವಾಗಿದ್ದು ಆಸ್ಪತ್ರೆ ಸೇರಿದ್ದಾನೆ.ಇನ್ನೂ ಎರಡೂ ಗುಂಪುಗಳ ಮೇಲೆ ಕೊಲೆ ಯತ್ನ ಕೇಸ್ ದಾಖಲಾಸಿರೋ ಬ್ಯಾಡರಹಳ್ಳಿ ಪೊಲೀಸ್ರು ಘಟನೆ ನಡೆದ 24 ಗಂಟೆಯಲ್ಲೇ ಎಲ್ಲಾ ಆರೋಪಿಗಳನ್ನ ಬಂಧಿಸಿ ಜೈಲಿಗಟ್ಟಿದ್ದಾರೆ.
-ಶ್ರೀನಿವಾಸ್ ಚಂದ್ರ ಕ್ರೈಂ ಬ್ಯೂರೋ ಪಬ್ಲಿಕ್ ನೆಕ್ಸ್ಟ್
PublicNext
19/08/2022 10:35 pm