ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: ಪತಿಯನ್ನ ಕೊಲ್ಲಲು ಮುಂದಾದ ಮಾಯಂಗನೆಗೆ ಡಬಲ್ ಶಾಕ್: ಪ್ರೀತಿಯ ಮೋಹಕ್ಕೆ ಬಿದ್ದ ಮೋಸಗಾರ್ತಿ ಅರೆಸ್ಟ್

ಬೆಂಗಳೂರು: ಆಕೆಗೆ ಮದುವೆ ಆಗಿ ವರುಷಗಳೇ ಕಳೆದಿದೆ. ಗಂಡನ ಜೊತೆಗೆ ಜೀವನ ಕಟ್ಟಿಕೊಂಡು ಸುಂದರ ಸಂಸಾರ ನಡೆಸಬೇಕಿತ್ತು. ಆದ್ರೆ ಹಳೇ ಪ್ರಿಯತಮ‌ನ ಮೋಹಕ್ಕೆ ಬಲಿಯಾಗಿ ಪತಿಯನ್ನ ಮಸಣ ಸೇರಿಸಲು ಪ್ಲಾನ್ ಮಾಡಿದ್ಳು. ಆದ್ರೆ ಪ್ಲಾನ್ ಉಲ್ಟಾ ಆಗಿ ಪತಿಯ ಬದಲು ಪ್ರಿಯಕರನೇ ಮಸಣ ಸೇರಿದ.

ಈಕೆ ಹೆಸ್ರು ಅನುಪಲ್ಲವಿ. ಈ ಕೃತ್ಯದ ಮಾಸ್ಟರ್ ಮೈಂಡ್. ನವೀನ್ ಅನುಪಲ್ಲವಿಯ ಪತಿ. ಮದುವೆಯಾಗಿದ್ರೂ ಅನುಪಲ್ಲವಿ ಹಿಮಂತ್ ಎಂಬಾತನನ್ನ ಪ್ರೀತಿಸುತ್ತಿದ್ಳು. ಆದರೆ ಗಂಡ ನವೀನ್ ಇವರಿಬ್ಬರ ನಡುವೆ ಅಡ್ಡಿಯಾಗಿದ್ದ. ಹೀಗಾಗಿ ನವೀನ್ ನನ್ನ ಕೊಲೆ ಮಾಡಲು ಅನುಪಲ್ಲವಿ ತನ್ನ ಪ್ರೇಮಿ ಹಿಮಂತ್ ಗೆ ಸುಪಾರಿ ನೀಡಿದ್ಲು. ಸುಪಾರಿ ಪಡೆದ ಹಿಮಂತ್ ಸ್ನೇಹಿತರಾದ ಹರೀಶ್ ಹಾಗು ನಾಗರಾಜ್ ನವೀನ್ನ ಕಿಡ್ನ್ಯಾಪ್ ಮಾಡಿದ್ರು. ಕಿಡ್ನ್ಯಾಪ್ ಮಾಡಿದ ಬಳಿಕ ಹರೀಶ್ ಹಾಗು ನಾಗರಾಜ್ ಇಬ್ಬರು ಸೇರಿ ನವೀನ್ ಗೆ ಕಂಠಮಟ್ಟ ಕುಡಿಸಿ ಆತನ ಮೇಲೆ ಟೊಮ್ಯಾಟೊ ಸಾಸ್ ಹಾಕಿ ಫೋಟೋ ತೆಗೆದು ನವೀನ್ ನನ್ನ ಕೊಂದಿದ್ದೇವೆಂದು ಹಿಮಂತ್ ಮೊಬೈಲ್ ಗೆ ಕಳಿಸಿದ್ರು.

ಫೋಟೋ ನೋಡಿ ಬೆದರಿದ ಹಿಮಂತ್ ಅಂದೇ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಇತ್ತ ನವೀನ್ ಅದ್ಹೇಗೋ ತಪ್ಪಿಸಿಕೊಂಡು ಬಂದು ಪೀಣ್ಯ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದ. ಆ ಪ್ರಕರಣ ಸಂಬಂಧ ನವೀನ್ ಪತ್ನಿ ಅನುಪಲ್ಲವಿ, ಅಮುಜಮ್ಮ, ಹರೀಶ್ , ನಾಗರಾಜ್ ಹಾಗು ಮುಗಿಲನ್ ಎಂಬುವವರನ್ನ ಪೊಲೀಸರು ಬಂಧಿಸಿದ್ದಾರೆ. ಇಲ್ಲಿ ಬಂಧಿತರಾದ ಹರೀಶ್ ಹಾಗು ನಾಗರಾಜ್ ನವೀನ್ ನನ್ನ ಕಿಡ್ನ್ಯಾಪ್ ಮಾಡಿ ತಮಿಳುನಾಡಿನ ವಿರೂದ್ ನಗರದಲ್ಲಿ ಕೊಲೆಗೆ ಯತ್ನಿಸಿದ್ರು. ಕೊಲೆ ಮಾಡಲು ತಮಿಳುನಾಡಿನ ಮುಗಿಲನ್ ಹಾಗೂ ಕಣ್ಣನ್ ಎಂಬಿಬ್ಬರನ್ನ ಕರೆಸಿಕೊಂಡಿದ್ದರು. ಸದ್ಯ ಪೀಣ್ಯಾ ಪೊಲೀಸರು ನಿರಂತರ ಕಾರ್ಯಾಚರಣೆಯಿಂದ ಆರೋಪಿಗಳನ್ನ ಬಂಧಿಸಿದ್ದಾರೆ.

ಒಟ್ಟಿನಲ್ಲಿ ಪ್ರೀತಿಯ ಮೋಹಕ್ಕೆ ಬಿದ್ದ ಅನುಪಲ್ಲವಿ ಗಂಡನಿಗೆ ಸುಪಾರಿ ಕೊಟ್ಟು ಜೈಲು ಸೇರಿದ್ರೆ. ಪ್ರೇಯಸಿ ಮೋಹಕ್ಕೆ ಸಿಲುಕಿ ಹಿಮಂತ್ ಮಸಣ ಸೇರಿದ್ದಾನೆ.

Edited By : Manjunath H D
PublicNext

PublicNext

19/08/2022 04:35 pm

Cinque Terre

34.8 K

Cinque Terre

5

ಸಂಬಂಧಿತ ಸುದ್ದಿ