ಬೆಂಗಳೂರು: ಪತಿ ಸತ್ರೆ ಪತ್ನಿಯೆ ಚಿತೆ ಏರ್ತಿದ್ದ ಇತಿಹಾಸವನ್ನ ನಾವೆಲ್ರೂ ಕೇಳಿದ್ವಿ. ಈ ಕಲಾದಲ್ಲೂ ಅಂತಹದ್ದೇ ಒಂದು ಮನಕಲಕುವ ಘಟನೆ ನಡೆದಿದೆ. ರಕ್ತ ಕ್ಯಾನ್ಸರ್ ನಿಂದ ಬಳಲುತ್ತಿದ್ದ ಪತಿ ನೇಣಿಗೆ ಶರಣಾಗುತ್ತಿದ್ದಂತೆ ಪತಿ ಜೊತೆಗೆ ಹೆಂಡತಿ ಮತ್ತು ಪುಟ್ಟ ಬಾಲಕನು ಸಾವನ್ನಪ್ಪಿದ ಹೃದಯ ವಿದ್ರಾವಕ ಘಟನೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಹೇಶ್ ಮತ್ತು ಜ್ಯೋತಿ ದಂಪತಿ ಬಹಳ ಅನ್ಯೋನ್ಯವಾಗಿದ್ದರು. ಇಬ್ಬರಿಗೆ ಸುಮಾರು 9 ವರ್ಷದ ಮುದ್ದಾದ ಮಗನಿದ್ದನು. ಸ್ವರ್ಗಕ್ಕೆ ಕಿಚ್ಚು ಹಚ್ಚು ಎಂಬಂತಿದ್ದ ಸಂಸಾರದಲ್ಲಿ ಅನಾರೋಗ್ಯದ ಬಿರುಗಾಳಿ ವೇಗವಾಗಿ ಬೀಸಿತ್ತು. ಮಹೇಶ್ ತೀವ್ರ ಹೊಟ್ಟೆ ನೋವು ಉಂಟಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆಕೊಡಿಸಿ ಪರೀಕ್ಷಿಸಿದಾಗ ಮಹೇಶ್ಗೆ ರಕ್ತ ಕ್ಯಾನ್ಸರ್ ಇರುವುದು ತಿಳಿದು ಬಂದಿದೆ. ಮೂಲತಃ ಮಂಡ್ಯ ಜಿಲ್ಲೆಯ ಮಳವಳ್ಳಿ ಮಹೇಶ್ ಕೋಣನಕುಂಟೆಯ ಎಸ್ಬಿಎಂ ಲೇಔಟ್ ನಲ್ಲಿ ವಾಸವಾಗಿದ್ದ. ಈತ ಬಿಬಿಎಂಪಿಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ.
ಬ್ಲಡ್ ಕ್ಯಾನ್ಸರ್ ಗೆ ಹೆದರಿ ತಾನು ಬದುಕಿದ್ರೆ ಚಿಕಿತ್ಸೆಗೆ ಹಣ ಹೊಂದಿಸಲು ಆಗಲ್ಲ. ಸತ್ರೆ ಕುಟುಂಬಕ್ಕೂ ಆಧಾರ ಇಲ್ಲ ಎಂದು ಯೋಚಿಸಿ ಡೆತ್ ನೋಟ್ ಬರೆದು ನೇಣಿಗೆ ಶರಣಾಗಿದ್ದಾನೆ.ಇನ್ನೂ ಹಾಸಿಗೆ ಮೇಲೆ ಪತಿ ಹಾಗೂ ಪತ್ನಿ ಜ್ಯೋತಿ ಶವ ಪತ್ತೆಯಾಗಿದ್ದು. ಪತ್ನಿ ಮತ್ತು ಮಗನನ್ನ ಕತ್ತು ಹಿಸುಕಿ ಕೊಂದ್ರಾ ಇಲ್ಲ ಗಂಡ ಸತ್ತ ನಂತರ ತಾಯಿ ಮಗ ವಿಷ ಸೇವಿಸಿ ಸತ್ರಾ ಗೊತ್ತಾಗಿಲ್ಲ.
ಸದ್ಯ ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಮರ್ಡರ್ ಮತ್ತು ಯುಡಿಆರ್ ಪ್ರಕರಣ ದಾಖಲಾಗಿದ್ದು ಪೊಲೀಸ್ರು ತನಿಖೆ ಮುಂದುವರಿಸಿದ್ದಾರೆ.
ಇನ್ನೂ ಸಾವಿಗೂ ಮುನ್ನ ಸ್ನೇಹಿತ ನಾಗೇಶ್ ಗೆ ಕರೆ ಮಾಡಿದ್ದ ಮಹೇಶ್ಆಸ್ಪತ್ರೆಯಿಂದ ರಿಪೋರ್ಟ್ ತರಲು ಹೇಳಿದ್ದ. ಅದರಂತೆ ನಾಗೇಶ್ ರಿಪೋರ್ಟ್ ತೆಗೆದುಕೊಂಡು ಮಹೇಶ್ ಗೆ ಫೋನ್ ಮಾಡಿದರು ಫೋನ್ ರಿಸೀವ್ ಮಾಡುತ್ತಿರಲಿಲ್ಲ. ಇದರಿಂದ ಮನೆಯ ಬಳಿಗೆ ತೆರಳಿದಾಗ ಬಾಗಿಲನ್ನು ತೆರೆಯಲಿಲ್ಲ. ಕಿಟಕಿಯಲ್ಲಿ ಇಣುಕಿ ನೋಡಿದಾಗ ನೇಣಿಗೆ ಶರಣಾಗಿರುವುದು ಗೊತ್ತಾಗಿದೆ.
PublicNext
18/08/2022 08:01 pm