ಬೆಂಗಳೂರು: ಕಾಲೇಜು ಬಳಿ ಚುಡಾಯಿಸಿದಕ್ಕೆ ಕೊಲೆ ಮಾಡಿದ್ದ ಘಟನೆ ಸಂಬಂಧ ಏಳು ಜನ ಆರೋಪಿಗಳನ್ನ ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ವಿದ್ಯಾರ್ಥಿಗಳ ಈ ಮಾರಾಮಾರಿಯಲ್ಲಿ ಅರ್ಬಝ್ ಎಂಬಾತ ಚಾಕು ಇರಿತದಿಂದ ಸಾವನ್ನಪ್ಪಿದ್ದ. ಇದೇ ಆಗಸ್ಟ್ 11ನೇ ತಾರೀಖಿನಂದು ಅರ್ಬಝ್‌ಗೆ ಚಾಕು ಇರಿದು ಕೊಂದು ಹಾಕಿ ಪರಾರಿಯಾಗಿದ್ದ ಪ್ರಮುಖ ಆರೋಪಿ ಸಾದ್ ಸೇರಿ ಏಳು ಜನ ಆರೋಪಿಗಳನ್ನ ಕೆ ಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ ಹಳ್ಳಿಯ ಪ್ರೋವಿನ್ಸ್ ಕಾಲೇಜಿನಲ್ಲಿ ಆಗಸ್ಟ್ 11ರಂದು ಸಾಂಸ್ಕೃತಿಕ ಕಾರ್ಯಕ್ರಮ ಇತ್ತು. ಈ ಕಾರ್ಯಕ್ರಮಕ್ಕೆ ಅದೇ ಕಾಲೇಜಿನ ಮೊದಲನೇ ವರ್ಷದ ಬಿಕಾಂ ವಿದ್ಯಾರ್ಥಿ ಸಾದ್ ಭಾಗಿಯಾಗಿದ್ದ. ಸಾದ್ ಡ್ಯಾನ್ಸ್ ಮಾಡುತ್ತಿದ್ದಾಗ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಚುಡಾಯಿಸುತ್ತಿದ್ದರು. ಈ ಗುಂಪಿನಲ್ಲಿ ಕೊಲೆಯಾದ ಅರ್ಬಜ್ ಕೂಡ ಇದ್ದ. ಇದರಿಂದ ಸಿಟ್ಟಿಗೆದ್ದ ಸಾದ್ ತನ್ನ ಏಳು ಜನರ ಗ್ಯಾಂಗ್ಅನ್ನು ಸೇರಿಸಿಕೊಂಡು ಪಿಯೂಸಿ ಹಾಗು ಡಿಗ್ರಿ ಹುಡುಗರು ಹೊಡೆದಾಟಕ್ಕೆ ಮುಂದಾಗಿದ್ರು. ಮೊದ ಮೊದಲು ಮಾತುಕತೆಯಲ್ಲಿ ಅಶ್ಲೀಲವಾಗಿ ಬೈದಾಡಿಕೊಂಡವರು ನಂತರ ಕೈ ಕೈ ಮಿಲಾಯಿಸುವ ಹಂತ ತಲುಪಿದ್ರು. ನಂತರ ಸಾದ್ ಹಾಗು ಗ್ಯಾಂಗ್ ಚಾಕುವಿನಿಂದ ಅರ್ಬಝ್‌ನಿಗೆ ಇರಿದು ಎಸ್ಕೇಪ್ ಆಗಿದ್ರು. ನಂತರ ಅರ್ಬಾಝ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದ ಕೆಜಿ ಹಳ್ಳಿ ಪೊಲೀಸರು ಸಾದ್ ಸೇರಿ ಏಳು ಜನರನ್ನ ಬಂಧಿಸಿದ್ದಾರೆ.
PublicNext
16/08/2022 07:00 pm