ಬೆಂಗಳೂರು: ಬೈಕ್ ಕದಿಯಲು ಬಂದಿದ್ದ ಕಳ್ಳರು ಸ್ಥಳೀಯನ ಮುಂಜಾಗೃತೆಯಿಂದ ಕಾಲ್ಕಿತ್ತಿದ್ದಾರೆ. ಮಧ್ಯರಾತ್ರಿ ವೇಳೆ ಮನೆ ಆಚೆ ನಿಲ್ಲಿಸಿದ್ದ ಬೈಕ್ ಕದಿಯಲು ಖದೀಮರು ಪ್ರಯತ್ನಿಸುವಾಗ ಗಮನಿಸಿದ ಸ್ಥಳೀಯನೊಬ್ಬ ಕೂಗಿಕೊಂಡಿದ್ದಾನೆ. ಇನ್ನೇನು ಜನ ಸೇರಬೇಕು ಎಂಬಷ್ಟರಲ್ಲಿ ಕಳ್ಳರು ಅಲ್ಲಿಂದ ಪಾರಾಗಿದ್ದಾರೆ. ದಕ್ಷಿಣ ಬೆಂಗಳೂರಿನ ನಿವಾಸಿಯಾದ ಅಕ್ಷಯ್ ರಾತ್ರಿ ಊಟ ಮುಗಿಸಿ ಮನೆಯ ಬಾಲ್ಕನಿಗೆ ಬಂದು ನೋಡಿದಾಗ ಕಳ್ಳರ ಕರಾಮತ್ತು ಬಯಲಾಗಿದೆ.
ಕೂಡಲೇ ಅಕ್ಷಯ್ ಪೊಲೀಸ್ ಕಂಟ್ರೋಲ್ ರೂಂಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಆದರೆ ಪೊಲೀಸ್ ಬರುವ ಮುನ್ನ ಖದೀಮರು ಬೈಕ್ ಕದಿಯಲು ಮುಂದಾದಾಗ ತಮ್ಮ ಮೊಬೈಲ್ ಫೋನ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ. ಸದ್ಯ ಪೊಲೀಸರು ವಿಡಿಯೋ ಆಧಾರದ ಮೇಲೆ ಕಳ್ಳರನ್ನು ಹಿಡಿಯಲು ಮುಂದಾಗಿದ್ದಾರೆ.
ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
16/08/2022 04:29 pm