ಬೆಂಗಳೂರು: ಸಮಾಜದಲ್ಲಿ ಶಾಂತಿ ಕದಡೋಕೆ ಅಂತಾನೆ ಕೆಲ ಪುಂಡರು ಇರ್ತಾರೆ. ಶಿವಮೊಗ್ಗದ ಮಾಲ್ ನಲ್ಲಿ ಒಬ್ಬಾತ ವೀರ್ ಸಾವರ್ಕರ್, ವಲ್ಲಬಾಯ್ ಫೋಟೋ ತೆಗೆಸಿ ಉದ್ದಟತನ ತೋರಿದ್ರೆ. ಸಿಲಿಕಾನ್ ಸಿಟಿಯಲ್ಲಿ ರಾತ್ರೋ ರಾತ್ರಿ ಪುನೀತ್ ಕೆರೆಹಳ್ಳಿ ಪಟಾಲಂ ಪಡೆ ಜೊತೆ ಬಂದು ದುಂಡಾವರ್ತನೆ ತೋರಿದ್ದಾನೆ.
ಕೆ ಆರ್ ಸರ್ಕಲ್ ನಲ್ಲಿ ಟಿಪ್ಪು ಸುಲ್ತಾನ್ ಬ್ಯಾನರ್ ಹರಿದ ಪುನೀತ್ ಕೆರೆಹಳ್ಳಿ ಆ್ಯಂಡ್ ಗ್ಯಾಂಗ್ ಪುಂಡಾಟ ತೋರಿದ್ದಾರೆ.ಅಮೃತ ಸ್ವಾತಂತ್ರ್ಯ ಮಹೋತ್ಸವ ಹಿನ್ನೆಲೆ ಕಾಂಗ್ರೆಸ್ ರ್ಯಾಲಿ ಹಿನ್ನೆಲೆ ರಸ್ತೆಇಕ್ಕೆಲಗಳಲ್ಲಿ ಎಲ್ಲಾ ನಾಯಕರ ಫೋಟೊ ಹಾಕಿದ್ರು.
ಅಂಬೇಡ್ಕರ್ , ಇಂದಿರಾಗಾಂಧಿ, ನೆಹರು , ಟಿಪ್ಪು ಸೇರಿದಂತೆ ಹಲವಾರು ಹೋರಾಟಗಾರರ ಭಾವಚಿತ್ರ ಮುದ್ರಿಸಲಾಗಿತ್ತು.
ಆದರೆ ಟಿಪ್ಪು ಭಾವಚಿತ್ರವಿರೊ ಬ್ಯಾನರ್ ನ್ನು ಈ ಗ್ಯಾಂಗ್ ಹರಿದು ಹಾಕಿದ್ದಾರೆ. ಇನ್ನು ಈ ಕೃತ್ಯ ನೋಡಿದ ದಾರಿಹೋಕರು ಕಂಟ್ರೋಲ್ ರೂಂ ಗೆ ಕರೆ ಮಾಹಿತಿ ಕೊಟ್ಟಿದ್ದಾರೆ.
ಸ್ವಾತಂತ್ರ್ಯ ಅಮೃತ ಮಹೋತ್ಸವ ಬೆನ್ನಲ್ಲಿ ಈ ರೀತಿಯ ಕೋಮು ಸಂಘರ್ಷಕ್ಕೆ ಕಾರಣವಾಗುವ ಕೃತ್ಯ ವೆಸಗುವವರ ಮೇಲೆ ಕಠಿಣ ಕಾನೂನು ಕ್ರಮದ ಅನಿವಾರ್ಯವಿದೆ. ಪೊಲೀಸ್ರು ಇಂಥಹ ಕಿಡಿಗೇಡಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳದಿದ್ದರೆ ಮತ್ತಷ್ಟು ಪ್ರಚೋದನೆಯಗುವ ಸಾಧ್ಯತೆಯಿದೆ.
PublicNext
14/08/2022 07:40 am