ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೆಂಗಳೂರು: OLXನಲ್ಲಿ ಬೈಕ್ ಖರೀದಿಗೆ ಹೋಗಿ ಹಣ ಕಳೆದುಕೊಂಡ ಯುವಕ- ಕೇಸ್‌ ದಾಖಲಿಸಿಕೊಳ್ಳಲು ಖಾಕಿ ನಕಾರ

ದೊಡ್ಡಬಳ್ಳಾಪುರ: ಆನ್ ಲೈನ್ ಆಪ್ OLXನಲ್ಲಿ ಕೆಟಿಎಂ ಬೈಕ್ ಕೊಳ್ಳಲು ಹೋದ ಯುವಕ ವಂಚನೆಗೆ ಒಳಗಾಗಿದ್ದಾನೆ. ಬೈಕ್ ಮಾರುವುದಾಗಿ ಹೇಳಿದ ವಂಚಕ ಗೂಗಲ್ ಪೇನಲ್ಲಿ 10 ಸಾವಿರ ತಗೊಂಡ್ ಫೋನ್ ಸ್ವೀಚ್ ಆಫ್ ಮಾಡಿದ್ದಾನೆ. ಇತ್ತ ವಂಚನೆ ಪ್ರಕರಣ ದಾಖಲಿಸಲು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ.

ದೊಡ್ಡಬಳ್ಳಾಪುರ ತಾಲೂಕಿನ ವೀರಾಪುರ ಗ್ರಾಮದ ನಿವಾಸಿ ಸುರೇಶ್ ವಂಚನೆಗೊಳಗಾದ ಯುವಕ. ದಾಂಡೇಲಿ ಮೂಲದ ಸುರೇಶ್ ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದ ಇಂಡೋ ಮಿಮ್ ಕಾರ್ಖಾನೆ ಕಾರ್ಮಿಕ. ಕಾರ್ಖಾನೆಯಿಂದ ಮನೆಗೆ ಓಡಾಲು ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಗೆ ಮುಂದಾದ ಸುರೇಶ್ ಆನ್ ಲೈನ್ ಮೊರೆ ಹೋದ. OLX ಆ್ಯಪ್ ನಲ್ಲಿ ಮಾರಾಟಕ್ಕೆ ಇಟ್ಟಿದ ಕೆಟಿಎಂ RC 200 ಬೈಕ್ ಆತನ ಗಮನ ಸೆಳೆಯುತ್ತದೆ. ಬೈಕ್ ಮಾರಾಟಗಾರನ ಮೊಬೈಲ್ ನಂಬರ್‌ಗೆ ಕರೆ ಮಾಡಿ ಬೈಕ್ ಬೆಲೆ ಮಾತನಾಡಿದ್ದ.

ನೆಲಮಂಗಲದ ಉಮೇಶ್ ಗೌಡ ಎಂದು ಪರಿಚಯಿಸಿಕೊಂಡಿದ್ದ ಆತ ಬೈಕ್ ಅನ್ನು ಒಂದು ಲಕ್ಷದ 20 ಸಾವಿರಕ್ಕೆ ಕೊಡುವುದ್ದಾಗಿ ಹೇಳಿದ್ದ. ಮುಗಂಡವಾಗಿ 5 ಸಾವಿರ ಗೂಗಲ್ ಪೇ ನಲ್ಲಿ ಹಾಕಿಸಿಕೊಂಡು ಉಮೇಶ್ ಗೌಡ ನಂತರ ಒಮ್ಮೆ ಬೈಕ್ ನೋಡಿ ಹೋಗುವಂತೆ ಹೇಳಿ ಮತ್ತೆ 5 ಸಾವಿರ ಗೂಗಲ್ ಪೇ ಮಾಡಿಸಿಕೊಂಡಿದ್ದ. ಆದರೀಗ ಉಮೇಶ್ ಗೌಡನ ಫೋನ್ ಸ್ವಿಚ್ ಆಫ್ ಆಗಿದೆ. ಆನ್‌ಲೈನ್‌ನಲ್ಲಿ ವಂಚನೆಗೊಳಾದ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸು ಹೋದರೆ ಪೊಲೀಸರು ನಿರಾಕರಿಸಿದ್ದಾಗಿ ಸುರೇಶ್ ಹೇಳಿದ್ದಾರೆ.

Edited By : Nagesh Gaonkar
PublicNext

PublicNext

13/08/2022 10:12 pm

Cinque Terre

38.05 K

Cinque Terre

1

ಸಂಬಂಧಿತ ಸುದ್ದಿ