ಬೆಂಗಳೂರು: ಮಂತ್ರಿ ಗ್ರೂಪ್ ಮಾಲೀಕನಿಂದ ಅಕ್ರಮ ಹಣ ವರ್ಗಾವಣೆ ಆರೋಪದಡಿ ಕಂಪೆನಿಗೆ ಸೇರಿದ 300.4 ಕೋಟಿ ರೂಪಾಯಿ ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ ಜಪ್ತಿ ಮಾಡಿದೆ.
ಸಾರ್ವಜನಿಕರಿಗೆ ಆಕರ್ಷಕ ಬೆಲೆಯಲ್ಲಿ ಪ್ಲ್ಯಾಟ್ ನಿರ್ಮಿಸಿಕೊಡುವುದಾಗಿ ನಂಬಿಸಿ ಕಂಪೆನಿಯು ಗ್ರಾಹಕರಿಂದ ಕೋಟ್ಯಂತರ ರೂಪಾಯಿ ಹಣ ಪಡೆದಿತ್ತು. ಏಳು ವರ್ಷವಾದರೂ ಪ್ಲ್ಯಾಟ್ ನಿರ್ಮಿಸದೆ ಹಣ ಇತರ ಉದ್ದೇಶಗಳಿಗೆ ಹಣ ವರ್ಗಾವಣೆ ಸಂಬಂಧ ಕಂಪೆನಿ ವಿರುದ್ಧ ಸುಬ್ರಮಣ್ಯನಗರ ಹಾಗೂ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗಳಲ್ಲಿ ಪ್ರತ್ಯೇಕ ಎರಡು ಪ್ರಕರಣಗಳು ದಾಖಲಾಗಿತ್ತು. ಈ ಸಂಬಂಧ ಇ.ಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆವ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿದ್ದರು. ತನಿಖಾ ಹಂತದಲ್ಲಿ ಅಕ್ರಮ ಎಸಗಿರುವುದು ಮೇಲ್ನೊಟಕ್ಕೆ ಕಂಡು ಬಂದಿದ್ದರಿಂದ ಕಳೆದ ಜೂನ್ 24ರಂದು ಮಂತ್ರಿ ಗ್ರೂಪ್ ಸಿಎಂಡಿ ಸುಶೀಲ್ ಪಾಂಡುರಂಗನನ್ನು ಬಂಧಿಸಿದ್ದರು.
ವಿಚಾರಣೆ ವೇಳೆ ಆಕರ್ಷಕ ಬೆಲೆಗೆ ಪ್ಲ್ಯಾಟ್ ನಿರ್ಮಿಸಿಕೊಡುವುದಾಗಿ ಜಾಹೀರಾತು ಪ್ರಕಟಿಸಿ ಗ್ರಾಹಕರನ್ನು ಸೆಳೆಯುತ್ತಿದ್ದರು. ಕಂತು ರೂಪದಲ್ಲಿ ಕೋಟ್ಯಂತರ ರೂಪಾಯಿ ಹಣ ಪಾವತಿಸಿಕೊಂಡು ಏಳು ವರ್ಷ ಮುಗಿದರೂ ಪ್ಲ್ಯಾಟ್ ನಿರ್ಮಿಸಿಕೊಡದೆ ವಂಚನೆ ಎಸಗಿರುವುದು ಕಂಡುಬಂದಿತ್ತು. ಸಾರ್ವಜನಿಕರ ಹಣವನ್ನ ಬೇರೆ ಬೇರೆ ಉದ್ದೇಶಗಳಿಗೆ ಬಳಸಿಕೊಂಡು ಮೋಸ ಮಾಡಕೊಂಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಮಂತ್ರಿ ಗ್ರೂಪ್‌ಗೆ ಸೇರಿದ 300.4 ಕೋಟಿ ರೂಪಾಯಿ ಸ್ತಿರಾಸ್ತಿ ಜಪ್ತಿ ಮಾಡಿಕೊಂಡಿದೆ.
PublicNext
12/08/2022 08:21 pm