ಬೆಂಗಳೂರು: ಎರಡು ದಿನದ ಹಿಂದೆ ತಾಯಿ ಮತ್ತು ಮಗು ಸಾವನ್ನಪ್ಪಿದ ಘಟನೆ ನಗರದ ಬನಶಂಕರಿ ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಹೌದು ಡೆಂಟಲ್ ಡಾಕ್ಟರ್ ಶೈಮಾ (39) ಆರಾಧನ ( 10) ಮೃತ ದುರ್ದೈವಿಗಳಾಗಿದ್ದಾರೆ. ಮೊನ್ನೆ ಬೆಳಿಗ್ಗೆ ಮಗು ಮತ್ತು ತಾಯಿ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.
ಮಗುವನ್ನು ನೇಣು ಹಾಕಿ,ತಾಯಿಯೂ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸಾವಿನ ಬಗ್ಗೆ ಮೃತ ಮಹಿಳೆಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.ಮೃತ ಶೈಮಾ ಮತ್ತು ಪತಿ ನಾರಾಯಣ್ ಡೆಂಟಲ್ ಡಾಕ್ಟರ್ ವೃತ್ತಿ ಇದ್ದು, ಕ್ಲಿನಿಕ್ ಇದೆ.
ಸದ್ಯ ಮೃತದೇಹಗಳನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಕುರಿತು ಬನಶಂಕರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
08/08/2022 03:41 pm