ಬೆಂಗಳೂರು:ಅದೆಷ್ಟು ಬಾರಿ ಸಂಚಾರಿ ಪೊಲೀಸರು ಬೈಕ್ ವೀಲಿಂಗ್ ಮಾಡುವ ಪುಂಡರ ಬೈಕ್ ಸೀಸ್ ಮಾಡಿದ್ದರು ಕೂಡ ಭಯಾನೆ ಪಡದೆ ಮತ್ತೆ ಮತ್ತೆ ರಸ್ತೆಗಳ ಮೇಲೆ ವೀಲಿಂಗ್ ಮಾಡಲು ಈ ಪುಂಡರು ಮುಂದಾಗುತ್ತಾರೆ. ಅದರಲ್ಲೂ ವೀಕೆಂಡ್ ಬಂದು ಬಿಟ್ಟರೆ ಸಾಕು, ವೀಲಿಂಗ್ ಪುಂಡರ ಹಾವಳಿ ಹೆಚ್ಚಾಗಿ ಬಿಡುತ್ತದೆ. ಬೆಂಗಳೂರು-ಚೆನ್ನೈ ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಕೆಂಡ್ ಆದರೆ ಸಾಕು ಮಧ್ಯ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಾ ಹಿಂದೆ ಬರುವ ವಾಹನ ಸವಾರರಿಗೆ ಜಾಗ ಬಿಡದೆ ತೊಂದರೆ ನೀಡುತ್ತಿದ್ದಾರೆ.
ಬೊಮ್ಮನಹಳ್ಳಿ ಸಿಗ್ನಲ್ ನಿಂದ ಪರಪ್ಪನ ಅಗ್ರಹಾರ ಸಿಗ್ನಲ್ ವರೆಗೆ ಈ ವೀಲಿಂಗ್ ಪುಂಡರ ಹಾವಳಿ ಹೆಚ್ಚಾಗಿದೆ ಮಧ್ಯರಾತ್ರಿ ವೇಳೆ ಮಧ್ಯ ರಸ್ತೆಯಲ್ಲಿ ವೀಲಿಂಗ್ ಮಾಡುತ್ತಾ ಸಾಗುವ ಈ ಪುಂಡರು ಹಿಂದೆ ಬರುವ ಯಾವುದೇ ವಾಹನಕ್ಕೆ ಜಾಗ ನೀಡದೆ ತೊಂದರೆ ನೀಡುತ್ತಿದ್ದಾರೆ.
ಇದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ರಾತ್ರಿ ವೇಳೆ ವಾಹನಗಳು ವೇಗವಾಗಿ ಚಲಿಸುತ್ತವೆ. ವೀಲಿಂಗ್ ಪುಂಡರಿಂದ ಅಪಘಾತ ಕೂಡ ಸಂಭವಿಸಬಹುದು.ಕೂಡಲೇ ಸಂಚಾರಿ ಪೊಲೀಸರು ಎಚ್ಚೆತ್ತುಕೊಂಡು ರಸ್ತೆ ಮೇಲೆ ವೀಲಿಂಗ್ ಮಾಡುತ್ತಾ ತೊಂದರೆ ನೀಡುವವರ ಮೇಲೆ ಕ್ರಮ ಕೈಗೊಳ್ಳಬೇಕು.
-ನವೀನ್ ಪಬ್ಲಿಕ್ ನೆಕ್ಸ್ಟ್ ಬೆಂಗಳೂರು.
PublicNext
08/08/2022 11:18 am