ಯಲಹಂಕ: ಕಬ್ಬಿಣ ಕದಿಯಲು ಬಂದ ಅಮರನಾಥ್ ಮೆಹ್ತಾ ಎಂಬಾತನ ಮೇಲೆ ಮೂವರ ತಂಡ ತೀವ್ರವಾಗಿ ಹಲ್ಲೆ ನಡೆಸಿದೆ. ಪರಿಣಾಮ ಮೆಹ್ತಾ ಅಸ್ವಸ್ಥಗೊಂಡಿದ್ದ.
ಬಾಗಲೂರು ಪೊಲೀಸ್ ಠಾಣೆ ವ್ಯಾಪ್ತಿಯ ದ್ವಾರಕಾನಗರದ ಮಂಜುನಾಥ ಕಬ್ಬಿಣದ ಅಂಗಡಿಯಲ್ಲಿ ಕಳ್ಳತನದ ವೇಳೆ ಮಾಲೀಕ ಕರುಣಾಕರನ್ ಮತ್ತು ಇನ್ನಿಬ್ಬರು ಸೇರಿ ಸಿಟ್ಟಿನಲ್ಲಿ ಕಳ್ಳನಿಗೆ ಚೆನ್ನಾಗಿಯೇ ಥಳಿಸಿದ್ದರು. ಈ ವೇಳೆ ಮೆಹ್ತಾ ಅಸ್ವಸ್ಥನಾಗಿಯೇ ಬಿಟ್ಟಿದ್ದ.
ಬಳಿಕ ತಮಗೇನು ಗೊತ್ತಿಲ್ಲ ಎಂಬಂತೆ ಮಾರಣಾಂತಿಕ ಏಟು ಕೊಟ್ಟವರು ನಾಟಕ ಆಡಿ ಆಸ್ಪತ್ರೆಗೆ ಸೇರಿಸಿದ್ದರು. ಆದರೆ, ಏಟು ತಿಂದಾತ ಸಾವನ್ನಪ್ಪಿದ್ದ! ಇದೀಗ ಬಾಗಲೂರು ಪೊಲೀಸರು ಕರುಣಾಕರನ್ ಸೇರಿ ಮೂವರನ್ನು ವಶಕ್ಕೆ ಪಡೆದು, ತನಿಖೆ ಮುಂದುವರೆಸಿದ್ದಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ನಮ್ಮ ಪ್ರತಿನಿಧಿ ಸುರೇಶ್ ಬಾಬು ನೀಡಿರುವ ಸಮಗ್ರ ವರದಿ ನಿಮಗಾಗಿ...
PublicNext
07/08/2022 10:30 pm