ಬೆಂಗಳೂರು: ಎನ್ಆರ್ ಐ ಮಹಿಳೆಯೊಬ್ಬರು ಬೆಂಗಳೂರಿನಲ್ಲಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ಮನೆಯನ್ನು ಪರಿಚಯದ ವ್ಯಕ್ತಿಯ ಹೆಸರಲ್ಲಿ ನೋಂದಣಿ ಮಾಡಿಸಿಕೊಟ್ಟಿದ್ದರು. ಆದರೆ ಅವರು ವಿದೇಶದಿಂದ ವಾಪಸ್ ಆದಾಗ ಆತ ಮನೆಯನ್ನು ಅವರ ಹೆಸರಿಗೆ ನೋಂದಣಿ ಮಾಡಿಕೊಡಲು ನಿರಾಕರಿಸಿದ ಘಟನೆ ಬೆಂಗಳೂರಿನ ಹುಳಿಮಾವು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೂಲತಃ ಬೆಂಗಳೂರಿನವರಾದ ಮಣಿ ತಿರುಮಲೆ ವಿದೇಶದಲ್ಲಿ ಇರುವಾಗ ಅವರಿಗೆ ಆರೋಪಿ ಕನ್ನಯ್ಯ ಕುಮಾರ್ ಬಿಟಿಎಂ ಲೇಔಟ್ ನಲ್ಲಿರುವ ಮನೆ ತೋರಿಸಿದ್ದಾನೆ. ಮಣಿ ತಿರುಮಲೆ ಆರೋಪಿಯಾದ ಕನ್ನಯ್ಯ ಕುಮಾರ್ ಯಾದವ್ ಗೆ ಹಣವನ್ನು ಟ್ರಾನ್ಸ್ಫರ್ ಮಾಡಿ ಮನೆಯನ್ನು ಕನ್ನಯ್ಯನ ಹೆಸರಿನಲ್ಲಿ ನೋಂದಣಿ ಮಾಡಿಕೊಳ್ಳಲು ಹೇಳಿದ್ದಾರೆ. ವಿದೇಶದಿಂದ ಬಂದ ನಂತರ ಮನೆಯನ್ನು ತನ್ನ ಹೆಸರಿಗೆ ನೋಂದಣಿ ಮಾಡಿಕೊಡಲು ಮಹಿಳೆ ಹೇಳಿದ್ದಾರೆ.
ಆದರೆ ವಿದೇಶದಿಂದ ಭಾರತಕ್ಕೆ ವಾಪಸ್ ಬಂದಾಗ ಆರೋಪಿ ಕನ್ನಯ್ಯ ಕುಮಾರ್ ಮನೆ ಅವರ ಹೆಸರಿಗೆ ನೋಂದಣಿ ಮಾಡಿಕೊಡಲು ನಿರಾಕರಿಸಿದ. ಇದರಿಂದ ಮಣಿ ತಿರುಮಲೆ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ. ಕೂಡಲೇ ಹುಳಿಮಾವು ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ತನಿಖೆ ನಡೆಸಿ ಆರೋಪಿ ಕನ್ನಯ್ಯಕುಮಾರ್ ನಿಂದ ಮಹಿಳೆಗೆ ವಾಪಸ್ ಮನೆ ಕೊಡಿಸಿದ್ದಾರೆ. ಈಗ ಕನ್ನಯ್ಯಕುಮಾರ್ ಜೈಲು ಸೇರಿದ್ದಾನೆ.
-ನವೀನ್, ಪಬ್ಲಿಕ್ ನೆಕ್ಸ್ಟ್, ಬೆಂಗಳೂರು
PublicNext
06/08/2022 07:02 pm